ಮಡಿಕೇರಿ, ನ 22 (DaijiworldNews/SM): ವಿಚಾರಣಾಧೀನ ಖೈದಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಈ ಘಟನೆ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಬೆಳಕಿಗೆ ಬಂದಿದೆ. ಮೂಲತಃ ಪಿರಿಯಾಪಟ್ಟಣದ ನಿವಾಸಿ, ಸಿದ್ದರಾಜು(22) ಆತ್ಮಹತ್ಯೆ ಮಾಡಿಕೊಂಡಾತ.
ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಿದ್ದರಾಜು, ಕೊಡಗು ಜಿಲ್ಲಾ ಪೊಲೀಸರಿಂದ ಬಂಧಿಸಲ್ಪಟ್ಟು ಕಳೆದ 4 ತಿಂಗಳಿಂದ ಮಡಿಕೇರಿಯ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯಾಗಿ ಬಂಧಿತನಾಗಿದ್ದ. ಶುಕ್ರವಾರ ಸಂಜೆ ಸಿದ್ದರಾಜು, ಸೆಲ್ನ ಒಳಗಿನ ಶೌಚಾಲಯದ ಗೋಡೆಯಲ್ಲಿದ್ದ ನೀರಿನ ಪೈಪ್ಗೆ ಸ್ಕ್ರೀನ್ನ ಒಂದು ತುಂಡನ್ನು ಹಗ್ಗದಂತೆ ಬಳಸಿಕೊಂಡು ನೇಣು ಬಿಗಿದುಕೊಂಡಿದ್ದಾನೆ ಎಂದು ಹೇಳಲಾಗಿದೆ.