ಕೋಟ, ನ 23 (Daijiworld News/MSP): ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವ ಎಲ್ಲಾ ವಾಹನಗಳಿಗೆ ದೇಶಾದ್ಯಂತ ಡಿಸೆಂಬರ್ 1ರಿಂದ ಪಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳಬೇಕಂಬ ಆದೇಶದ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಸ್ಥಳೀಯ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಟೋಲ್ ವಿನಾಯಿತಿ ಮುಂದುವರಿಯಬೇಕು ಹಾಗೂ ಸ್ಥಳೀಯ ವಾಹನಗಳಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕೆಂಬ ಚರ್ಚಿಸುವ ಸಲುವಾಗಿ ಸಾಸ್ತಾನ ಟೋಲ್ ಪ್ಲಾಜಾ ಬಳಿ ಶುಕ್ರವಾರ ಟೋಲ್ ಪ್ಲಾಜಾ ಬಳಿ ಜಮಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ ಡಿಸೆಂಬರ್ 1ರಿಂದ ಪಾಸ್ಟ್ ಟ್ಯಾಗ್ ಅಳವಡಿಸುವ ಕುರಿತಂತೆ ಸ್ಥಳೀಯ ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ವಾಹನಗಳಿಗೆ ಯಾವ ರೀತಿ ರಿಯಾಯಿತಿ ಮುಂದುವರಿಸುವ ಕುರಿತಂತೆ ಮಾಹಿತಿ ಪಡೆಯುವ ಉದ್ದೇಶದಿಂದ ಇಲ್ಲಿಗೆ ಜಮಾಯಿಸಿದ್ದೇವೆ ಆದರೆ ಅವರಿಗೆ ಸಮರ್ಪಕವಾದ ಮಾಹಿತಿ ಇನ್ನೂ ಸಿಕ್ಕಿಲ್ಲ ಆದ್ದರಿಂದ ನಮ್ಮ ಯಥಾಸ್ಥಿತಿ ಬೇಡಿಕೆಯನ್ನು ಮುಂದುವರಿಸಲು ಮನವಿ ಮಾಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ನಾವು ಸ್ಥಳೀಯರು ಟೋಲ್ ನೀಡಲ್ಲ ಅಲ್ಲದೆ ಪಾಸ್ಟ್ ಟ್ಯಾಗ್ ನಿಂದ ಟೋಲ್ನ ಎರಡು ಭಾಗಗಳಲ್ಲಿ ಸ್ಥಳೀಯ ವಾಹನಗಳಿಗೆ ಮೀಸಲಿರಿಸಬೇಕು ಅಲ್ಲದೆ ಪಾಸ್ಟ್ ಟ್ಯಾಗ್ ಕುರಿತಂತೆ ನಮ್ಮದೇನು ಅಭ್ಯಂತರವಿಲ್ಲ ಎನ್ನುವ ಅಭಿಪ್ರಾಯಕ್ಕೆ ನಾವುಗಳು ಬದ್ಧರಾಗಿದ್ದೇವೆ. ಆದರೆ ನಮ್ಮ ವಾಹನಗಳು ಸರದಿ ಸಾಲುಗಳಂತೆ ನಿಂತರೆ ,ಟೋಲ್ ರಿಯಾಯಿತಿ ಯಿಂದ ಹೊರಗಿಟ್ಟರೆ ಉಗ್ರಹೋರಾಟ ಕೈಗೊಳ್ಳುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸಾಸ್ತಾನ ಟೋಲ್ ಪ್ಲಾಜಾ ದ ಉಸ್ತುವಾರಿ ಕೇಶವಮೂರ್ತಿ ಮಾತನಾಡಿ ಈ ವರೆಗೆ ನಮ್ಮಗೆ ಸ್ಥಳೀಯ ವಾಹನಗಳ ರಿಯಾಯಿತಿ ಕುರಿತಂತೆ ಈ ವರೆಗೆ ಯಾವುದೇ ಕ್ರಮಕೈಗೊಳ್ಳಲು ಮಾಹಿತಿ ಇಲ್ಲ ಸೋಮವಾರದ ನಂತರ ಸಂಪೂರ್ಣ ಮಾಹಿತಿ ಸಿಗುತ್ತದೆ.ಇಲ್ಲಿಯವರೆಗೆ ಸಿಗುತ್ತಿದ್ದ ಸೌಲಭ್ಯ ಡಿಸೆಂಬರ್ 1ರವರೆಗೆ ಇರುತ್ತದೆ ನಂತರದ ಕ್ರಮದ ಬಗ್ಗೆ ತಿಳಿಸಲಾಗುವುದು.ಈ ಸಂದರ್ಭದಲ್ಲಿ ಹೆದ್ದಾರಿ ಜಾಗೃತಿ ಸಮಿತಿಯ ವಿಠಲ್ ಪೂಜಾರಿ ಐರೋಡಿ,ಶ್ಯಾಮಸುಂದರ ನಾಯಿರಿ,ರಾಜೇಶ್ ಕಾವೇರಿ,ನಾಗರಾಜ್ ಗಾಣಿಗ,ಗೋವಿಂದ ಪೂಜಾರಿ,ಭೋಜ ಪೂಜಾರಿ,ಸುರೇಶ್ ಗಿಳಿಯಾರ್,ಅಲ್ವಿನ್ ಅಂದ್ರೆ,ಸಂದೀಪ್ ಕುಂದರ್ ಕೋಡಿ ಮತ್ತಿತರರು ಉಪಸ್ಥಿತರಿದ್ದರು.