ಬೈಂದೂರು,ನ 23 (Daijiworld News/MSP): ತಾಲೂಕಿನ ಹಕ್ಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂದಬಾರಂದಾಡಿಯಲ್ಲಿ ಅತೀ ಪ್ರಾಚೀನ ಸಂಸ್ಕ್ರತ ಭಾಷೆಯ ದೇವನಾಗರಿ ಲಿಪಿಯನ್ನು ಇತಿಹಾಸ ಸಂಶೋಧಕರಾದ ಡಾ.ಕಿಶೋರ ಕುಮಾರ್ ಶೆಟ್ಟಿ ಇವರ ನೇತೃತ್ವದ ಸಂಶೋಧನೆಯಲ್ಲಿ ಪತ್ತೆಯಾಗಿದೆ.
ಬೈಂದೂರು ತಾಲೂಕಿನ ಹಕ್ಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂದಬಾರಂದಾಡಿಯಲ್ಲಿ ಅತೀ ಪ್ರಾಚೀನ ಸಂಸ್ಕೃತ ಭಾಷೆಯ ದೇವನಾಗರಿ ಲಿಪಿಯನ್ನು ಇತಿಹಾಸ ಸಂಶೋಧಕರಾದ ಶ್ರೀ ಕಿಶೋರ್ ಕುಮಾರ್ ಶೆಟ್ಟಿ ಇವರ ನೇತ್ರತ್ವದ ಸಂಶೋಧನೆಯಲ್ಲಿ ಪತ್ತೆಯಾಗಿದ್ದು ಪುರಾತನವಾದ ಕ್ರಿ.ಶ 7-8 ನೇ ಶತಮಾನದ ಹಳೆಯ ಕಾಲದ ಶಾಸನವಾಗಿದೆ.
ಶಾಸನದ ಪ್ರಭಾವಳಿಯು 0.60 ಮೀಟರ್ ಉದ್ದ,0.27ಮೀಟರ್ ಎತ್ತರವಿದೆ.ಪ್ರಭಾವಳಿಯಲ್ಲಿ ಶಿವಲಿಂಗ (0.16 ಮೀಟರ್ ಎತ್ತರ , 0.17 ಮೀಟರ್ ಅಗಲ ವಿದೆ) ದೀಪ ಸ್ಥಂಭ (0.12 ಮೀಟರ್ ಎತ್ತರ, 0.07 ಮೀಟರ್ ಅಗಲ ವಿದೆ) ರಾಜ ಕತ್ತಿ(0.08 ಮೀಟರ್ ಎತ್ತರ 0.03 ಮೀಟರ್ ಅಗಲವಿದೆ) ಚಂದ್ರ (0.07.5 ಮೀಟರ್ ಇದೆ) ಸೂಯ೯ (0.05 ಮೀಟರ್ )ಒಟ್ಟು ಅಕ್ಷರದ ಎತ್ತರ 0.72 ಮೀಟರ್ ಇದ್ದು ,ಅಗಲ 0.62 ಮೀಟರ್ ಇದೆ .ಒಟ್ಟು ಶಾಸನದ ಎತ್ತರ 1.02 ಮೀಟರ್ ಆಗಿದೆ . ಒಟ್ಟು 34 ಕ್ರಮಾಂಕದ ಸಾಲುಗಳಿರುವುದು ಕಂಡು ಬಂದಿದೆ.
ಕರಾವಳಿಯ ಈ ಭಾಗದ ಇತಿಹಾಸದ ಮೇಲೆ ಇದೊಂದು ಬೆಳಕು ಚೆಲ್ಲುವ ಸಂಶೋಧನೆಯಾಗಿದ್ದು,ಈ ಭಾಗದಲ್ಲಿ ಪತ್ತೆ ಹಚ್ಚಿದ ಬಹುತೇಕ ಶಾಸನಗಳು ಹಳೆಗನ್ನಡ, ಕನ್ನಡ , ಆಗಿದೆ. ಆದರೆ ಈ ಸಂಶೋಧನರಯಲ್ಲಿ ಸಿಕ್ಕಿರುವ ಶಾಸನ ಬಹಳ ವಿಭಿನ್ನವಾಗಿದೆ.ಆ ಮೂಲಕ ಈ ಭಾಗದ ಅಭಿವೃದ್ಧಿಗೆ ಭಾರತೀಯ ರಾಜರುಗಳ ಕೊಡುಗೆಗಳು ಹಾಗೂ ಸ್ಥಳೀಯ ವಿಚಾರಗಳ ಬಗ್ಗೆ ತಿಳಿಯ ಬಹುದಾಗಿದೆ ಹಾಗೂ ಇದೊಂದು ದಾನ ಶಾಸನವಾಗಿದೆ.
ಶಾಸನವನ್ನು ಇತಿಹಾಸ ಸಂಶೋಧಕರಾದ ಶ್ರೀ ಡಾ.ಕಿಶೋರ್ ಕುಮಾರ್ ಶೆಟ್ಟಿ ಸಂಶೋಧನೆಯಲ್ಲಿ ಪತ್ತೆ ಹಚ್ಚಿದ್ದು, ಪಡಿಯಚ್ಚುಕಾರರಾಗಿ ಪ್ರದೀಪ ಕುಮಾರ್ ಬಸ್ರೂರು ಪಡಿಯಚ್ಚು ತೆಗೆಯಲಾಯಿತು. ಈ ಸಂದರ್ಭದಲ್ಲಿ ಶಾಸನದ ಬಗ್ಗೆ ಅರಿವು ಮೂಡಿಸಲು ಭಂಡಾರ್ ಕಾರ್ಸ್ ಕಾಲೇಜು ವಿದ್ಯಾರ್ಥಿ ಗಳಾದ ಪ್ರಜ್ಞಾ.ಎಸ್ ,ಲಕ್ಷ್ಮೀ, ನಿರೀಕ್ಷಾ,ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಅನ್ವಿತಾ,ಸರಕಾರಿ ಪ್ರೌಢ ಶಾಲೆ ಹಕ್ಲಾಡಿಯ ವಿದ್ಯಾರ್ಥಿಗಳಾದ ಪ್ರಖ್ಯಾತ್, ಪ್ರೀತಮ್, ಗೌತಮ್, ಸುಶ್ಮೀತ,ಅನನ್ಯ, ಇವರಿಗೆ ಶಾಸನದ ಅರಿವು ಕಾರ್ಯವನ್ನು ನಡೆಸಲಾಯಿತು. ಸ್ಥಳೀಯರಾಗಿ ರಾಮ, ಲಕ್ಷ್ಮಣ, ಪಾರ್ವತಿ ಬಾಳೆಹಿತ್ಲು ಕುಂದಬಾರಂದಾಡಿ ಇವರು ಸಹಕರಿಸಿರುತ್ತಾರೆ. ಸಂಶೋಧನೆಯ ಹಂತದಲ್ಲಿ ಇದ್ದು ಬಳಿಕವಷ್ಟೇ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿರುತ್ತಾರೆ.