ಮಂಗಳೂರು, ನ 24(Daijiworld News/MB) : ಕಟೀಲು ಮೇಳದಲ್ಲಿ ನಡೆದ ಘಟನೆಯ ಹಿನ್ನಲೆಯಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಕಟೀಲು ಯಕ್ಷಗಾನ ಮೇಳದ ಹಾಲಿ ಪರಿಸ್ಥಿತಿ ಹಾಗೂ ಮೇಳ ಹೊರಡುವ ವೇಳೆ ಉಂಟಾದ ಘಟನೆಗಳ ಬಗ್ಗೆ ರಾಜ್ಯ ಸರಕಾರಕ್ಕೆ ಸಮಗ್ರವಾದ ವರದಿ ಸಲ್ಲಿಸುವಂತೆ ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಅವರಿಗೆ ಸೂಚಿಸಿದ್ದಾರೆ.
ಕಟೀಲು ದೇವಸ್ಥಾನ ರಥಬೀದಿಯಲ್ಲಿ ಆಯೋಜಿಸಿದ್ದ ಕಟೀಲು ಯಕ್ಷಗಾನ ಮೇಳಗಳ ಈ ಋತುವಿನ ತಿರುಗಾಟದ ಮೊದಲ ಯಕ್ಷಗಾನದಲ್ಲಿ ಯಕ್ಷಗಾನದ ನಡೆಯುತ್ತಿದ್ದ ಸಮಯದಲ್ಲಿ ಭಾಗವತಿಕೆ ನಡೆಸಲು ಬಂದ ಪಟ್ಲ ಸತೀಶ್ ಶೆಟ್ಟಿಯವರನ್ನು ಎಬ್ಬಿಸಿ ಕಳುಹಿಸಲಾಗಿತ್ತು.
ಈ ಕುರಿತು ಸತೀಶ್ ಅವರು ನನಗೆ ರಂಗಸ್ಥಳಕ್ಕೆ ಹೋಗಬೇಡಿ ಎನ್ನುವ ಯಾವ ಮುನ್ನೂಚನೆಯೂ ನೀಡಿರಲಿಲ್ಲ ಎಂದು ಹೇಳಿದ ಹಿನ್ನಲೆಯಲ್ಲಿ ಪಟ್ಲ ಸತೀಶರಿಗೆ ರಂಗಸ್ಥಳ ಪ್ರವೇಶಿಸದಂತೆ ಈ ಮೊದಲೇ ಸೂಚನೆ ನೀಡಿಲಾಗಿದೆ ಎಂದು ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಸ್ಪಷ್ಟೀಕರಣ ನೀಡಿದ್ದರು.