ಉಡುಪಿ ಜ 14 : ಬೈಕ್ ಹಾಗೂ ಇನ್ನೋವಾ ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಗಂಭೀರ ಗಾಯಗೊಂಡ ಘಟನೆ ಉಡುಪಿಯ ನಿಟ್ಟೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಹಠಾತ್ತಾಗಿ ನಿಟ್ಟೂರು ಹೆದ್ಡಾರಿಯಿಂದ ಕೊಡಂಕ್ಕೂರು ಕಡೇ ಸಾಗುತ್ತಿದ್ದ ಬೈಕ್ ಕಾರಿಗೆ ಡಿಕ್ಕಿ ಹೊಡೆದಿದೆ. ಆದರೆ ಈ ಅಪಘಾತವನ್ನು ತಪ್ಪಿಸಲು ಹೋದ ಇನ್ನೋವಾ ಕಾರಿನ ಚಾಲಕ ಮುಂದಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಬೈಕ್ ನಲ್ಲಿ ಕುಳಿತಿದ್ದ ಮೂವರು ಗಂಭೀರ ವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೈಕ್ ಸವಾರನ ಅತಿಯಾದ ವೇಗ ಹಾಗೂ ಅವಸರದ ಚಾಲನೆಯಿಂದ ಘಟನೆ ನಡೆದಿದ್ದು ಬೈಕ್ ಸವಾರನನ್ನು ತಪ್ಪಿಸಲು ಕಾರಿನ ಚಾಲಕ ಹರಸಾಹಸ ಪಟ್ಟರೂ ಪ್ರಯತ್ನ ವಿಫಲವಾಗಿದೆ. ಉಡುಪಿ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
.jpeg)
.jpeg)