ಕೊಲ್ಲೂರು, ನ 26 (Daijiworld News/MB) : ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್ ಸೈಟ್ ಆರಂಭಿಸಿ ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದ್ದು ಜನರು ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
www.kollurmookambika.org ದೇವಸ್ಥಾನದ ಅಧಿಕೃತ ವೆಬ್ಸೈಟ್ ಆಗಿದ್ದು ಜನರು ತಮ್ಮ ಸೇವೆ ಸಲ್ಲಿಸಲು ಈ ವೆಬ್ಸೈಟ್ ಬಳಸಬೇಕು. www.mookambika.co.in ದೇವಸ್ಥಾನದ ಅನುಮತಿ ಪಡೆಯದೆ ಮಾಡಿರುವ ನಕಲಿ ವೆಬ್ಸೈಟ್ ಆಗಿದ್ದು ಅದನ್ನು ಬಳಸಬಾರದು ಎಂದು ಹೇಳಿದ್ದಾರೆ.
ಭಕ್ತಾಧಿಗಳು ನಕಲಿ ವೆಬ್ ಸೈಟ್ ಬಳಸುವುದರಿಂದ ದೇವಸ್ಥಾನದ ಆದಾಯಕ್ಕೆ ನಷ್ಟ ಉಂಟಾಗುತ್ತಿದೆ. ಹಾಗೂ ನಕಲಿ ವೆಬ್ ಸೈಟ್ ಹೊಂದಿದವರು ಹಣ ಮಾಡುತ್ತಿದ್ದಾರೆ ಎಂದು ಹೇಳಿದ್ದು ಈ ಕುರಿತು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.