ನೆಲ್ಯಾಡಿ, ನ 26 (Daijiworld News/MSP): ಗಸ್ತು ತಿರುಗುತ್ತಿದ್ದ ವೇಳೆ ವಿಷ ಜಂತು ಕಡಿದು ಅರಣ್ಯ ರಕ್ಷಕರೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ವರದಿಯಾಗಿದೆ. ಮೃತರನ್ನು ಭೀಮಪ್ಪ ಇಲ್ಲಾಳ ಎಂದು ಗುರುತಿಸಲಾಗಿದೆ.
ಕರ್ನಾಟಕ ಅರಣ್ಯ ಇಲಾಖೆಯ ಮಂಗಳೂರು ವಿಭಾಗದ ಪಂಜ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭೀಮಪ್ಪ ಇಲ್ಲಾಳ ಅವರು, ಮೂಲತಃ ಬಾಗಲಕೋಟೆ ಜಿಲ್ಲೆಯವರಾಗಿದ್ದು 2009 ರಲ್ಲಿ ಪಂಜ ವಲಯದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.
ಗಸ್ತು ತಿರುಗುತ್ತಿದ್ದ ವೇಳೆ ವಿಷ ಜಂತು ಕಡಿದು ಅಸ್ವಸ್ಥಗೊಂಡಿದ್ದ ಇವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ
ನ.೨೭ ಬುಧವಾರ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಗ್ರಾಮದಲ್ಲಿ ಮೃತರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.