ಮೂಡಬಿದಿರೆ, ನ 27 (Daijiworld News/MB) : ಯುನೈಟೆಡ್ ಕಿಂಗ್ಡಮ್ ನ ಲಂಡನ್ ವೇಲ್ಸ್ ಬುರ್ಮಿಂಗ್ ಹ್ಯಾ ಮ್ ಲಂಡನ್ ಮೊದಲಾದ ದೇಶ ಗಳಿಂದ ಸುಮಾರು 6 ಬಸ್ಗಳಲ್ಲಿ ಬಂದ ಪ್ರವಾಸಿಗರು ಬುಧವಾರ ವಿಶಾಲ ವಾದ ಬ್ರಹತ್ ಕಂಬ ಗಳಿಂದೊಡಗೂಡಿದ ಸಾವಿರ ಕಂಬ ದ ಬಸದಿಗೆ ಭೇಟಿ ನೀಡಿದ್ದು ಬಸದಿಯ ಸೊಬಗನ್ನು ನೋಡಿ ವಿವಿಧ ಕೋನಗಳಿಂದ ಭೈರದೇವಿ ಮಂಟಪದ ಕಂಬಗಳ ಚಿತ್ರ ಕ್ಲಿಕ್ಕಿಸಿ ಕೊಂಡರು.
ನವೆಂಬರ್ 26ರಂದು ನವ ಮಂಗಳೂರು ಬಂದರಿಗೆ ಈ ವರ್ಷದ ಐದನೇ ಐಷಾರಾಮಿ ಪ್ರವಾಸಿ ಹಡಗು ಬಂದಿದ್ದು ಈ ಕಾಸ್ಟವಿಕ್ಟೋರಿಯಾ ಎಂಬ ಹೆಸರಿನ ಹಡಗಿನಲ್ಲಿ ಒಟ್ಟು 1900 ಪ್ರವಾಸಿಗರು ಆಗಮಿಸಿದ್ದಾರೆ. ಈ ಪ್ರವಾಸಿಗರಿಗೆ ಮಂಗಳೂರು ನಗರದ ಪ್ರವಾಸಿತಾಣಗಳನ್ನು ನೋಡಲು ಎನ್ಎಂಪಿಟಿ ವ್ಯವಸ್ಥೆ ಮಾಡಿದ್ದು ಇದೀಗ ಪ್ರವಾಸಿಗರು ಬಸದಿಗೆ ಭೇಟಿ ನೀಡಿದ್ದಾರೆ.
ಇಟಲಿಯ ಈ ಹಡಗು ದುಬೈನಿಂದ ಮುಂಬೈಗೆ ತೆರಳಿದ್ದು ಅಲ್ಲಿಂದ ಮಂಗಳೂರಿಗೆ ಬಂದು ಇನ್ನೂ ಕೊಚ್ಚಿಗೆ ಪ್ರಯಾಸ ಬೆಳೆಸಲಿದೆ.