ಉಡುಪಿ ಜ 15 : ಇಲ್ಲಿನ ಹೋಟೆಲ್ ಒಂದರಲ್ಲಿ ನಾಯಿ ಮಾಂಸದ ಬಿರಿಯಾನಿ ತಯಾರಿಸಿ ಗ್ರಾಹಕರಿಕೆ ಮಾರಾಟ ಮಾಡುತ್ತಿದ್ದಾರೆ ಎಂದು ಮಾಹಿತಿ ತಿಳಿದು ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಯಾರೋ ಕಿಡಿಗೇಡಿಗಳು ಹರಿಯಬಿಟ್ಟಿದ್ದಾರೆ. ಈ ಬಗ್ಗೆ ಗೊಂದಲಕ್ಕೊಳಗಾಗಿ ವಿಚಾರಿಸಲು ಗ್ರಾಹಕರು , ಪತ್ರಕರ್ತರು , ಹಾಗೂ ಸಾರ್ವಜನಿಕರು ಹೊಟೇಲ್ ಮಾಲೀಕರಿಗೆ ಕಾಲ್ ಮೇಲೆ ಕಾಲ್ ಮಾಡಿದ್ದು ಇದರಿಂದ ಕಿರಿಕಿರಿಗೊಳಗಾದ ಹೊಟೇಲ್ ಮಾಲೀಕರು ಹೊಟೇಲ್ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದ ಸುದ್ದಿಯ ಈ ಬಗ್ಗೆ ನಗರದ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ ಇದೊಂದು ಸುಳ್ಳುಸುದ್ದಿಯಾಗಿದ್ದು, ಹೊರರಾಜ್ಯದಲ್ಲಿ ನಡೆಸಿದ ಹೋಟೆಲ್ ವೊಂದರ ದಾಳಿ ಸಂದರ್ಭದ ಚಿತ್ರಗಳನ್ನೇ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಹರಿಯಬಿಡುತ್ತಿದ್ದಾರೆ,ಉಡುಪಿ ಪೊಲೀಸರು ಯಾವುದೇ ದಾಳಿ ನಡೆಸಿಲ್ಲ, ಸುಳ್ಳು ಸುದ್ದಿ ನಂಬಬಾರದು ಎಂದು ಮನವಿ ಮಾಡಿದ್ದಾರೆ.