ಮಂಗಳೂರು ಜ 15: ಉಳ್ಳಾಲ ಟಾರ್ಗೆಟ್ ಗ್ರೂಪ್ ರೂವಾರಿ, ನಟೋರಿಯಸ್ ರೌಡಿ ಇಲ್ಯಾಸ್ ಹತ್ಯೆಗೆ ಸೇಡು ತೀರಿಸದೆ ಬಿಡಲಾರೆವು ಎಂದು ಹೇಳಿಕೊಳ್ಳುವ ಆಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಯಾಸ್ ಹತ್ಯೆಯ ಪ್ರತಿಕಾರ ಮಾಡದೆ ಬಿಡಲಾರೆವು. ಮಲಗಿದ್ದವನ ಮೇಲೆ ದಾಳಿ ಮಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ ..ಲೆಕ್ಕ ಚುಕ್ತಾ ಮಾಡುತ್ತೇವೆ..ಇದು ಇಲ್ಲಿಗೆ ಮುಗಿದಿಲ್ಲ .. ಎಂದು ಬ್ಯಾರಿ ಹಾಗೂ ಮಲಯಾಳಂ ಭಾಷೆಯಲ್ಲಿರುವ ಆಡಿಯೋ ವೈರಲ್ ಆಗಿದೆ.
ಜ.15 ರ ಶನಿವಾರ ಬೆಳಗ್ಗೆ ಟಾರ್ಗೆಟ್ ಇಲ್ಯಾಸ್ ನ್ನು ಮಂಗಳೂರಿನ ಜೆಪ್ಪು ಕುದ್ಪಾಡಿಯಲ್ಲಿರುವ ಆತನ ಫ್ಲಾಟ್ ಗೆ ಸ್ನೇಹಿತರ ನೆಪದಲ್ಲಿ ನುಗ್ಗಿದ ದುಷ್ಕರ್ಮಿಗಳು ಚೂರಿಯಿಂದ ಇರಿದು ಹತ್ಯೆ ಮಾಡಿದ್ದರು. ಟಾರ್ಗೆಟ್ ಗ್ಯಾಂಗಿನಲ್ಲಿ ಈ ಹಿಂದೆ ಜತೆಯಲ್ಲೇ ಇದ್ದವರು ಈ ಕೃತ್ಯ ನಡೆಸಿದ್ದರೆಂಬ ಶಂಕೆ ವ್ಯಕ್ತವಾಗಿತ್ತು.ಇಲ್ಯಾಸ್ ಕಾಂಗ್ರೆಸ್ ಪಕ್ಷದಲ್ಲಿ ಮತ್ತು ಉಳ್ಳಾಲ ಭಾಗದಲ್ಲಿ ಸಕ್ರಿಯವಾಗಿದ್ದರಿಂದ ಮುಸ್ಲಿಂ ಯುವಕರ ಬೆಂಬಲಗಳಿಸಿದ್ದ.
ಹತ್ಯೆಗೀಡಾದ ಇಲ್ಯಾಸ್