ಉಡುಪಿ ಜ 15: ಪೊಡವಿಗೊಡೆಯ ಶ್ರೀಕೃಷ್ಣ ನಾಡಿನಲ್ಲಿ ಚೂರ್ಣೋತ್ಸವದದ ಸಂಭ್ರಮ. ಮಕರಸಂಭ್ರಮದ ಮರು ದಿನದ ಅನ್ನ ಬ್ರಹ್ಮನ ಸನ್ನಿದ್ದಿಯಲ್ಲಿ ಚೂರ್ಣೋತ್ಸವ ನಡೆಯುತ್ತದೆ. ಈ ಹಿನ್ನಲೆಯಲ್ಲಿ ಮಕರ ಸಂಕ್ರಮದ ಮಾರನೇ ದಿನವಾದ ಇಂದು ಬೆಳಗ್ಗೆ ಶ್ರೀ ಕೃಷ್ಣ ಹಾಗೂ ಮುಖ್ಯ ಪ್ರಾಣ ದೇವರ ಉತ್ಸವ ಮೂರ್ತಿಯನ್ನು ಬ್ರಹ್ಮ ರಥದಲ್ಲಿ ಕುಳ್ಳಿರಿಸಿ ರಥಬೀದಿಯ ಸುತ್ತಾ ರಥವನ್ನು ಎಳೆಯಲಾಯಿತು. 800 ವರ್ಷಗಳ ಹಿಂದೆ ಮಕರಸಂಕ್ರಾತಿಯ ದಿನದಂದು ಮದ್ವಚಾರ್ಯಯರು ಶ್ರೀ ಕೃಷ್ಣನನ್ನು ಪ್ರತಿಷ್ಠಾಪಿಸಿದರೆಂಬ ಪ್ರತೀತಿ ಇದೆ. ಅಂದಿನಿಂದ ಇಂದಿನವರೆಗೆ ಈ ಸಂಪ್ರಾದಾಯ ನಿರಂತರವಾಗಿ ನಡೆಯುತ್ತಾ ಬಂದಿದೆ. ಮಕರ ಸಂಕ್ರಾತಿಯ ದಿನ ಮೂರು ತೇರುಗಳ ರಥೋತ್ಸವ ನಡೆದರೆ ಮರುದಿನ ಬೆಳಗ್ಗೆ ಹಗಲು ರಥೋತ್ಸವ ನಡೆಯುವುದು ಪುರಾತನ ಕಾಲದಿಂದಲೂ ನಡೆದು ಬಂದ ವಾಡಿಕೆ. ಅಂತೆಯೇ ಇಂದು ಬೆಳಗ್ಗೆ ಶ್ರೀಕೃಷ್ಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ರಥೋತ್ಸವ ನಡೆಸಲಾಯಿತು. ಈ ವೈಭವದ ರಥೋತ್ಸವಕ್ಕೆ ದೇಶದ ಮೂಲೆ ಮೂಲೆಗಳಿಂದ ಅಸಂಖ್ಯಾತ ಭಕ್ತರು ದಂಡು ಹರಿದು ಬಂದಿದ್ದು ರಥ ಬೀದಿ ತುಂಬಿ ತುಳುಕಿತ್ತು.