ಮಂಗಳೂರು, ನ.29(Daijiworld News/SS): ಮುಡಿಪು ಸಂತ ಜೋಸೆಫ್ ವಾಜ್ ಪುಣ್ಯಕ್ಷೇತ್ರದಲ್ಲಿ ನಾಲ್ಕು ದಿನ ನಡೆಯಲಿರುವ ವಾರ್ಷಿಕ ಮಹೋತ್ಸವ-2019ರ ಪ್ರಯುಕ್ತ ಶುಕ್ರವಾರ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಡಾ.ಫಾ.ಅಲೋಶಿಯಸ್ ಪಾವ್ಲ್ ಡಿಸೋಜ ಅವರ ನೇತೃತ್ವದಲ್ಲಿ ದಿವ್ಯ ಬಲಿಪೂಜೆ ನಡೆಯಿತು.
ಗುರುವಾರ ಅಜ್ಮೀರ್ ಧರ್ಮಪಾಂತ್ಯದ ಧರ್ಮಗುರು ಅತಿ ವಂದನೀಯ ಡಾ.ಫಾ.ಪಿಯುಸ್ ಥೋಮಸ್ ಸೋಜ್ ನೇತೃತ್ವದಲ್ಲಿ ದಿವ್ಯ ಬಲಿಪೂಜೆ ನಡೆದಿತ್ತು. ಶನಿವಾರ ಬರೇಲಿ ಧರ್ಮಪಾಂತ್ಯದ ಧರ್ಮಗುರು ಅತಿ ವಂದನೀಯ ಡಾ.ಫಾ.ಇಗ್ನೇಷಿಯಸ್ ಸೊಜ್, ಭಾನುವಾರ ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರು ಅತಿ ವಂದನೀಯ ಡಾ.ಫಾ.ಪೀಟರ್ ಪಾವ್ಲ್ ಸಲ್ದಾನ ಹಾಗೂ ಸೋಮವಾರ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಗುರು ಅತಿ ವಂದನೀಯ ಡಾ.ಫಾ.ಲಾರೆನ್ಸ್ ಮುಕುಝಿ ನೇತೃತ್ವದಲ್ಲಿ ದಿವ್ಯ ಬಲಿಪೂಜೆ ನಡೆಯಲಿದೆ.
ಈ ಸಂದರ್ಭ ಮುಡಿಪು ಸಂತ ಜೋಸೆಫ್ ವಾಜ್ ಪುಣ್ಯಕ್ಷೇತ್ರದ ನಿರ್ದೇಶಕ ಫಾ.ಬೆಂಜಮಿನ್ ಪಿಂಟೊ, ಸಹನಿರ್ದೇಶಕ ಫಾ.ಶೋನ್ ರೋಡ್ರಿಗಸ್, ಪೆರ್ಮನ್ನೂರು ಚರ್ಚ್'ನ ಪ್ರಧಾನ ಧರ್ಮಗುರು ಡಾ.ಫಾ.ಜೆ.ಬಿ.ಸಲ್ದಾನ, ಮಡ್ಯಂತ್ಯಾರ್ ಚರ್ಚ್ನ ಧರ್ಮಗುರು ಫಾ.ಆ್ಯಂಡ್ರೂ ಡಿಸೋಜ, ಸಹಾಯಕ ಧರ್ಮಗುರು ಡಾ.ಫಾ.ಸ್ಟ್ಯಾನಿ ಡಿಸೋಜ, ಮಂಗಳೂರು ಜೆಪ್ಪು ಸೆಮಿನರಿಯ ಪ್ರಾಧ್ಯಾಪಕ ಫಾ. ಲಿಯೋ ಲಸ್ರಾದೊ, ಕಟೀಲ್ ಚರ್ಚ್ ನ ಧರ್ಮಗುರು ಫಾ.ಮೈಕಲ್ ಮಸ್ಕರೇನಸ್, ಫರಂಗಿಪೇಟೆ ಚರ್ಚ್ ನ ಧರ್ಮಗುರು ಫಾ.ಜೆರಾಲ್ಡ್ ಲೋಬೊ, ವೆಲೆನ್ಸಿಯಾ ಚರ್ಚ್ ನ ಸಹಾಯಕ ಧರ್ಮಗುರು ಫಾ.ಜೋಸ್ಟಿನ್ ಡಿಸೋಜ, ಸಂತ ಜೋಸೆಫ್ ವಾಜ್ ಮಂಗಳೂರು ದಕ್ಷಿಣ ವಲಯ ವ್ಯಾಪ್ತಿಯ ಧರ್ಮಗುರುಗಳಾದ ಫಾ.ಲಾರೆನ್ಸ್ ಮಸ್ಕರೇನಸ್, ಫಾ.ಮೈಕಲ್ ಡಿಸೋಜ, ಫಾ.ಸಂತೋಷ್ ಡಿಸೋಜ, ಫಾ. ಎಡ್ವಿನ್ ಡಿಸೋಜ, ಫಾ.ಎಲಿಯಾಸ್ ಡಿಸೋಜ, ಫಾ.ಡೆನ್ನಿಸ್ ಸುವಾರಿಸ್, ಫಾ.ಸುನಿಲ್ ವೇಗಸ್, ಮುಡಿಪು ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ರೋಶನ್ ಡಿಸೋಜ, ಕಾರ್ಯದರ್ಶಿ ಮಾರ್ಸೆಲ್ ಡಿಸೋಜ, ಪುಣ್ಯಕ್ಷೇತ್ರ ಸಮಿತಿ ಸದಸ್ಯ ಅರುಣ್ ಡಿಸೋಜ ಮುಡಿಪು, ಪಾಲನಾ ಮಂಡಳಿ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.