ಮಂಗಳೂರು, ನ 30(Daijiworld News/MSP): ಕಾಸರಗೋಡು ಮೂಲದ ಸುದರ್ಶನ್ (20) ಬರ್ಬರವಾಗಿ ಹತ್ಯೆ ಮಾಡಿದ ಆರೋಪಿ ಕೊಲೆ ಮಾಡಿದ ಬಳಿಕ ಪೊಲೀಸರಿಗೆ ಕರೆ ಮಾಡಿದ್ದ ಎಂದು ತಿಳಿದುಬಂದಿದೆ.
ಸುದರ್ಶನ್
ರೌಡಿ ರಕ್ಷಿತ್ ಎಂಬಾತ ಸುದರ್ಶನ್ ಮೃತದೇಹವನ್ನು ರೈಲ್ವೆ ಹಳಿ ಎಸೆದು ಬಳಿಕ ಉಳ್ಳಾಲ ಪೊಲೀಸ್ ಠಾಣೆಗೆ ಕರೆ ಮಾಡಿ ತಾನು ಹತ್ಯೆ ನಡೆಸಿರುವ ಬಗ್ಗೆ ತಿಳಿಸಿದ್ದಾನೆ. " ನಾನು ಓರ್ವನನ್ನು ಕೊಂದು ಹಳಿ ಮೇಲೆ ಬಿಸಾಕಿದ್ದೇನೆ. ಈಗ ನಿಮ್ಮ ಕೈಗೆ ಸಿಕ್ಕಿದರೆ ನೀವು ಎನ್ ಕೌಂಟರ್ ಮಾಡಬಹುದು. ನಾಳೆ ಬಂದು ಶರಣಾಗುತ್ತೇನೆ" ಎಂದು ಹೇಳಿ ಆರೋಪಿಯೂ ಫೋನ್ ಸ್ವಿಚ್ ಆಫ್ ಮಾಡಿದ್ದಾನೆ ಎಂದು ಉಳ್ಳಾಲ ಪೊಲೀಸರು ತಿಳಿಸಿದ್ದಾರೆ.
ಸುದರ್ಶನ್ ರೌಡಿ ರಕ್ಷಿತ್ ನ ಪ್ರಿಯತಮೆಗೆ ಕಿರುಕುಳ ನೀಡುತ್ತಿದ್ದು, ಆತ ಎಚ್ಚರಿಕೆ ನೀಡಿದ ಬಳಿಕವೂ ತನ್ನ ಚಾಳಿ ಮುಂದುವರಿಸಿದ್ದ ಕಾರಣಕ್ಕೆ ಹತ್ಯೆ ನಡೆಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.