ಮಂಗಳೂರು, ನ 30(Daijiworld News/MSP): ಪೋಷಕರು ಮಕ್ಕಳಿಗೆ ಸರಿಯಾದ ಶಿಸ್ತು, ಹಿರಿಯರಿಗೆ ಗೌರವ ನೀಡಲು ಕಲಿಸಬೇಕು. ಮಕ್ಕಳನ್ನು ಮೊಬೈಲ್ನಿಂದ ದೂರವಿಟ್ಟು ಹೆತ್ತವರು ಮಕ್ಕಳೊಂದಿಗೆ ಹೆಚ್ಚು ಸಮಯವನ್ನು ಕಳೆಯಬೇಕು ಎಂದು ಸೇಕ್ರೆಡ್ ಹಾರ್ಟ್ಸ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ವಾರ್ಷಿಕೋತ್ಸವದ ಅಧ್ಯಕ್ಷೀಯ ಭಾಷಣದಲ್ಲಿ ವಂದನೀಯ ಭಗಿನಿ ಎಮ್. ಸಿಸಿಲಿಯಾ ಮೆಂಡೋನ್ಸ ಬಿ.ಎಸ್, ಪ್ರಾಂತಿಯ ಮುಖ್ಯಸ್ಥೆ ಮತ್ತು ಕಾರ್ಪೊರೇಟ್ ಮ್ಯಾನೇಜರ್ ಮಂಗಳೂರು ಇವರು ಹೇಳಿದರು. ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಾರ್ಷಿಕೋತ್ಸವವು ಆರಂಭವಾಗಿ ನಂತರ ಸಭಾ ಕಾರ್ಯಕ್ರಮ ನಡೆಯಿತು.
ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಕ್ರೀಡೆ ಮತ್ತು ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಮತ್ತು ತರಗತಿವಾರು ಕಲಿಕೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಕಾರ್ಪೊರೇಟರ್ಗಳಾದ ಶ್ರೀಭಾಸ್ಕರ್ ಕೆ, ಶ್ರೀ ಕಿಶೋರ್ ಕೊಟ್ಟಾರಿ ಹಾಗೂ ಶ್ರೀಮತಿ ಕಾವ್ಯ ನಟರಾಜ್ ಆಳ್ವ ,ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಶ್ರೀ ಪುಷ್ಪರಾಜ್ ಪೂಜಾರಿ, ಸಾಂತಾಕ್ರೂಜ್ ಕ್ವಾನೆಂಟಿನ ಮುಖ್ಯಸ್ಥೆ ವಂದನಿಯ ಭಗಿನಿ ರೇಖಾ ಬಿ.ಎಸ್ ಮುಖ್ಯ ಅಥಿತಿಗಳಾಗಿ ವೇದಿಕೆಯಲ್ಲಿದ್ದರು. ಶಾಲಾ ಸಂಚಾಲಕಿ ವಂದನಿಯ ಭಗಿನಿ ಡಾ! ಮಾರಿಯೋಲ ಬಿ.ಎಸ್ ರವರು ಸ್ವಾಗತಿಸಿದರು. ಶ್ರೀ. ಜಾನ್ ಡಿಸೋಜ ಮತ್ತು ಶ್ರೀಮತಿ ಸೆರಫಿನ ಜೆನಿಫ್ರೆಡ್ ರೊಡ್ರಿಗಸ್ ನಿರೂಪಿಸಿದರು ಹಾಗೂ ಶಾಲಾ ಮುಖ್ಯ ಶಿಕ್ಷಕಿ ವಂದನಿಯ ಭಗಿನಿ ಲವಿಟಾ ವಂದಿಸಿದರು. ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವು ಮುಂದುವರಿಯಿತು.