ಮಂಗಳೂರು, ಡಿ 1 (Daijiworld News/MB) : ಪರ್ಸ್ನಲ್ಲಿ ಬುಲೆಟ್ ಇಟ್ಟುಕೊಂಡಿದ್ದ ಯುವಕನ ವಿರುದ್ದ ನಡೆಯುತ್ತಿದ್ದ ವಿಚಾರಣೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.
ತನ್ನ ತಾಯಿಯ ಮಾತಿಗೆ ಬೆಲೆ ಕೊಡದೆ ಮನೆಯ ಬಳಿ ಬಿದಿದ್ದ ಬುಲೆಟ್ನ್ನು ತನ್ನ ಪರ್ಸ್ನಲ್ಲಿ ಇಟ್ಟುಕೊಂಡಿದ್ದ ಯುವಕನು ಸುಮಾರು 3 ವರ್ಷಗಳ ಕಾಲ ಕ್ರಿಮಿನಲ್ ವಿಚಾರಣೆಗೆ ಒಳಗಾಗಿದ್ದು ಸಾಕಷ್ಟು ಸಂಕಷ್ಟ ಅನುಭವಿಸಿದ್ದ.
ಮಂಗಳೂರು ಮೂಲದ ಯುವಕ ಅರ್ಜುನ್ ಪರಶುರಾಮ್ ಮೈಸೂರಿನಲ್ಲಿ ಮೊದಲ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದು ,ಮಂಗಳೂರಿನ ಜೆಎಂಎಫ್ಸಿ ಕೋರ್ಟ್ನಲ್ಲಿ ಅವನ ವಿರುದ್ಧ ನಡೆಯುತ್ತಿದ್ದ ಪ್ರಕರಣವನ್ನು ನ್ಯಾಯಾಮೂರ್ತಿ ಆರ್.ದೇವದಾಸ್ ಅವರಿದ್ದ ನ್ಯಾಯಾಪೀಠ ರದ್ದುಗೊಳಿಸಿದೆ.
ಯುವಕರು ಹೇಗೆ ತಮ್ಮ ನಿರ್ಲಕ್ಷ್ಯತನದಿಂದ ಗಂಭೀರ ಸಮಸ್ಯೆಗಳಿಗೆ ಎದುರಾಗುತ್ತಾರೆ ಎನ್ನುವುದಕ್ಕೆ ಈ ಪ್ರಕರಣ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ನ್ಯಾಯಾಮೂರ್ತಿಗಳು ಹೇಳಿದ್ದಾರೆ.
ಈ ಮೊದಲು ನಡೆದಿರುವ ಇಂತಹ ಪ್ರಕರಣಗಳನ್ನು ಉಲ್ಲೇಖಿಸಿರುವ ನ್ಯಾಯಾಲಯ ಅರ್ಜಿದಾರರ ಬಳಿ ಬುಲೆಟ್ ಇದ್ದರೂ ಅದನ್ನು ಬಳಸುವ ಯಾವುದೇ ಶಸ್ತ್ರಾಸ್ತ್ರ ಅವರ ಬಳಿ ಇಲ್ಲ ಎಂದು ತಿಳಿಸಿದ್ದಾರೆ.
ಅರ್ಜುನ್ ಪರಶುರಾಮ್ ಮೈಸೂರಿನಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು ಆತನ ತಾಯಿ ಹಾಗೂ ಸಹೋದರ ಮಂಗಳೂರಿನಲ್ಲಿ ನೆಲೆಸಿದ್ದಾರೆ. ತಂದೆ ಜಾಮ್ ನಗರದ ಪರಟ್ರೋಕೆಮಿಕಲ್ ಇಂಡಸ್ಟ್ರಿಯಲ್ಲಿ ಪ್ರಾಜೇಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.
2016ರಲ್ಲಿ ರಜೆಯ ಅವಧಿಯಲ್ಲಿ ಅರ್ಜುನ್ ಆತನ ತಾಯಿ ಹಾಗೂ ಸಹೋದರನೊಂದಿಗೆ ವಿಮಾನ ಮುಖೇನ ರಾಜಕೋಟ್ಗೆ ಪ್ರಯಾಣ ಮಾಡಿದ್ದು ಆ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ ಅರ್ಜುನ್ ಪರ್ಸ್ನಲ್ಲಿ ಬುಲೆಟ್ ದೊರೆತಿದ್ದು ವಿಚಾರಿಸಿದಾಗ ಮನೆಯ ಬಳಿ ಆಟವಾಡುವಾಗ ಕಟ್ಟಡ ನಿರ್ಮಾಣದ ಬಳಿ ಬುಲೆಟ್ ದೊರೆತಿದ್ದು ಕುತೂಹಲದಿಂದ ಜೇಮಿನಲ್ಲಿಟ್ಟಿದೆ. ಆನಂತರ ಪರ್ಸ್ನಲ್ಲಿ ಇರಿಸಿದ್ದೇನೆ ಎಂದು ಹೇಳಿದ್ದಾನೆ.
ಈ ಕುರಿತು ಆತನ ತಾಯಿ ಆ ಬುಲೆಟ್ಅನ್ನು ಬಿಸಾಡುವಂತೆ ಸೂಚಿಸಿದ್ದೆ, ಆತ ಬಿಸಾಡುವಂತೆ ನಾಟಕ ಮಾಡಿದ್ದಾಗಿ ಹೇಳಿದ್ದಾರೆ. ಆದರೂ ಭದ್ರತಾ ಸಿಬ್ಬಂದಿಗಳು ಆತನ ಮೇಲೆ ಕೇಸು ದಾಖಲಿಸಿ ಬಂಧನ ಮಾಡಿದ್ದರು. 2016 ಡಿ.24ರಂದು ಜಾಮೀನು ಪಡೆದು ಹೊರಬಂದಿದ್ದನು. ಆನಂತರ ಪ್ರಕರಣ ರದ್ದು ಮಾಡುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದನು.