ಮಂಗಳೂರು ಜ 16 : ಉಳ್ಳಾಲ ಟಾರ್ಗೆಟ್ ಗ್ರೂಪ್ ರೂವಾರಿ, ನಟೋರಿಯಸ್ ರೌಡಿ ಇಲ್ಯಾಸ್ ಹತ್ಯೆ ಪ್ರಕರಣವನ್ನು ಚುರುಕುಗೊಳಿಸುವಂತೆ ಒತ್ತಾಯಿಸಿ ಪೊಲೀಸರಿಗೆ ಇಲ್ಯಾಸ್ ಪತ್ನಿ ಫರಾನಾ ಬರೆದಿರುವ ಪತ್ರ ಎನ್ನಲಾದ ಒಂದು ಪತ್ರದ ಪೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಾನು ಈ ಪತ್ರ ನೊಂದು ಬರೆದಿದ್ದು ತನಗೆ ನ್ಯಾಯ ದೊರೆಯಬೇಕು. ತನ್ನ ಪತಿ ಇಲ್ಯಾಸ್ ನನ್ನು ಕೊಂದ ಪಾಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ಇಲ್ಲವಾದಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುವ ಸಾರಂಶದ ಪತ್ರ ಬರೆದಿದ್ದಾರೆ. ಆದರೆ ವೈರಲ್ ಆದಾ ಈ ಪತ್ರ ಖುದ್ದು ಇಲ್ಯಾಸ್ ಪತ್ನಿ ಫರಾನಾ ಬರೆದಿದ್ದೋ ಅಥವಾ ಆಕೆಯ ಹೆಸರಿನಲ್ಲಿ ಇನ್ಯಾರೋ ಪತ್ರ ಬರೆದಿದ್ದಾರೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಆಕೆಯೇ ಪತ್ರ ಬರೆದಿದ್ದು ಎನ್ನುವ ಒಕ್ಕಣೆಯೊಂದಿಗೆ ಪತ್ರ ಮಾತ್ರ ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ.
ಇನ್ನು ಜ 6 ಶನಿವಾರ ಬೆಳಗ್ಗೆ ಟಾರ್ಗೆಟ್ ಇಲ್ಯಾಸ್ ನ್ನು ಮಂಗಳೂರಿನ ಜೆಪ್ಪು ಕುದ್ಪಾಡಿಯಲ್ಲಿರುವ ಆತನ ಫ್ಲಾಟ್ ಗೆ ಸ್ನೇಹಿತರ ನೆಪದಲ್ಲಿ ನುಗ್ಗಿದ ಆಗಂತುಕರಿಬ್ಬರು ಚೂರಿಯಿಂದ ಇರಿದು ಹತ್ಯೆ ಮಾಡಿದ್ದರು. ಟಾರ್ಗೆಟ್ ಗ್ಯಾಂಗಿನಲ್ಲಿ ಒಂದು ಕಾಲದಲ್ಲಿ ಒಟ್ಟಿಗಿದ್ದವರೇ ಕೃತ್ಯ ನಡೆಸಿದ್ದರೆಂಬ ಶಂಕೆ ವ್ಯಕ್ತವಾಗಿತ್ತು.
ಇಲ್ಯಾಸ್