ಮಂಗಳೂರು, ಡಿ 01 (DaijiworldNews/SM): ತೊಕ್ಕೊಟ್ಟು ಸಮೀಪದ ಕಾಪಿಕಾಡ್ ಎಂಬಲ್ಲಿ ಕಾಸರಗೋಡು ಮೂಲದ ಸುದರ್ಶನ್ ಎಂಬವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರೌಡಿ ಡಿ.ಕೆ ರಕ್ಷಿತ್ ಪ್ರಕರಣದ ಆರೋಪಿ.
ಆರೋಪಿ ಭಾನುವಾರ ಸಂಜೆ ಎಸಿಪಿ ವಿಶೇಷ ಪೊಲೀಸ್ ತಂಡಕ್ಕೆ ಶರಣಾಗಿದ್ದಾರೆ. ಈಗಾಗಲೇ ಆರೋಪಿ ಎರಡು ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಠಾಣಾ ಪೊಲೀಸರಿಗೆ ಬೇಕಾಗಿದ್ದ ಎಂದು ತಿಳಿದುಬಂದಿದೆ. ಇನ್ನು ತನ್ನ ಪ್ರೇಯಸಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಸುದರ್ಶನ್ ಆಕೆಯ ವೀಡಿಯೋ ಚಿತ್ರೀಕರಣ ನಡೆಸಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಆರೋಪಿ ಕೃತ್ಯ ಎಸಗಿದ್ದಾನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.