ಕುಂದಾಪುರ ಜ 15: ಬೈಕ್ ಮೂಲಕ ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದ ಪಾದ್ರಿಯೊಬ್ಬರಿಗೆ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪಿದ ಘಟನೆ ಜ 15 ರ ಸೋಮವಾರ ತಡರಾತ್ರಿ ಬೈಂದೂರು ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ. ಮೃತ ಪಾದ್ರಿಯನ್ನು ಬೈಂದೂರಿನ ಮುದೂರು ಚರ್ಚ್ ನ ಪಾದ್ರಿಯಾದ ಮತ್ತು ಸೈಂಟ್ ಥಾಮಸ್ ಕಾಲೇಜಿನ ಸಹ ಪ್ರಾಂಶುಪಾಲ ಫಾದರ್ ಅಬ್ರಹಾಂ ಕಲ್ಲಪಟ್ ಎಂದು ತಿಳಿದು ಬಂದಿದೆ.
ಘಟನೆ ವಿವರ
ವಿದ್ಯಾರ್ಥಿ ಯೋರ್ವನಿಗೆ ಅನಾರೋಗ್ಯ ಹಿನ್ನೆಲೆ ಬೈಂದೂರಿನ ಸಮುದಾಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಅವನ ಜೊತೆಗಿರಲೆಂದು ಇನ್ನೋರ್ವ ವಿದ್ಯಾರ್ಥಿ ಯನ್ನ ಕರೆತರುವ ಉದ್ದೇಶದಿಂದ ತೆರಳಿದ ಸಂದರ್ಭದಲ್ಲಿ ರಾ.ಹೆ 66 ರನ್ನು ದಾಟಲೆಂದು ಹೋಗುವಾಗ ಮಂಗಳೂರು ಕಡೆಯಿಂದ ಬೆಳಗಾಂಗೆ ತೆರಳುವ ಖಾಸಗಿ ಬಸ್ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಫಾದರ್ ಅಬ್ರಾಹಂ ಗಂಬೀರ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಸಾವನ್ನಪ್ಪಿದಾರೆ. ಫಾದರ್ ಮೃತದೇಹವನ್ನ ಕುಂದಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು. ಸಂಜೆ ವೇಳೆ ಕಾಲೇಜಿನ ಆವರಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುವುದು ಎಂದು ತಿಳಿದುಬಂದಿದೆ. ವಿದ್ಯಾರ್ಥಿಗಳ ಕುರಿತು ಅಪಾರ ಪ್ರೀತಿ ಹೊಂದಿದ್ದ ಇವರ ಸಾವು ವಿದ್ಯಾರ್ಥಿಗಳನ್ನ ದುಃಖದ ಕಡಲಲ್ಲಿ ಮುಳುಗಿಸಿದೆ.
ಮೂಲತಃ ಕೇರಳದ ವೈನಾಡು ನಿವಾಸಿಗಳಾದ ಇವರು ಕಳೆದ ನಾಲ್ಕು ವರ್ಷಗಳಿಂದ ಮುದೂರಿನ ಮಲಂಗಾರ್ ಚರ್ಚ್ನನಲ್ಲಿ ಪಾದ್ರಿಗಳಾಗಿ ಸೇವೆ ಸಲ್ಲಿಸುತ್ತಿದ್ದರು. ಬೈಂದೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.