ಪುತ್ತೂರು, ಡಿ 4 (Daijiworld News/ MB) : ಕೆಲಸಕ್ಕೆ ಹೋಗುವಂತೆ ಬುದ್ಧಿವಾದ ಹೇಳಿದ ತಂದೆಯನ್ನು ಮಗನೇ ಮಚ್ಚಿನಿಂದ ಕಡಿದು ಹತ್ಯೆ ಮಾಡಿದ ಘಟನೆ ಡಿ 4 ರ ಬುಧವಾರ ಪುತ್ತೂರು ಠಾಣಾ ವ್ಯಾಪ್ತಿಯ ಪಾಣಾಜೆ ಗ್ರಾಮದ ಬೊಳ್ಳಿಂಬಳದಲ್ಲಿ ನಡೆದಿದೆ.
ಮೃತ ಪಟ್ಟವರನ್ನು ಕೃಷ್ಣ ನಾಯ್ಕ್ ಎಂದು ಗುರುತಿಸಲಾಗಿದೆ.
ಕೃಷ್ಣ ನಾಯ್ಕ್ ತನ್ನ ಮಗ ಉದಯ್ ನಾಯ್ಕ್ ಹಾಗೂ ಪತ್ನಿಯೊಂದಿಗೆ ವಾಸವಾಗಿದ್ದು ಮಗ ಉದಯ ನಾಯ್ಕ್ (28) ಕೆಲಸಕ್ಕೆ ಹೋಗದೆ ಮನೆಯಲ್ಲೇ ಕಾಲಹರಣ ಮಾಡುತ್ತಿದ್ದ ಬಗ್ಗೆ ತಂದೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದು ಇದೇ ವಿಚಾರವಾಗಿ ತನ್ನ ಮಗನೊಂದಿಗೆ ಆಗಾಗೆ ಜಗಳವಾಗುತ್ತ ಇರುತ್ತದೆ.
ಬುಧವಾರ ಬೆಳಗ್ಗೆ ಇದೇ ವಿಚಾರವಾಗಿ ಜಗಳವಾಡಿದ್ದು ಸಂಜೆ 7:30 ಕ್ಕೆ ಮತ್ತೆ ತಕರಾರು ಎತ್ತಿದಾಗ ಇದೇ ವಿಚಾರವಾಗಿ ಮೃತ ಕೃಷ್ಣ ನಾಯ್ಕ್ ಅವರು ತನ್ನ ಮಗನೊಂದಿಗೆ ಜಗಳವಾಡಿದ್ದು ಸಂಜೆ ಮತ್ತೆ ಇದೇ ವಿಚಾರಕ್ಕೆ ತಕರಾರು ಎತ್ತಿದಾಗ ಕುಪಿತನಾದ ಉದಯ ನಾಯ್ಕ್ ಮನೆಯಲ್ಲಿದ್ದ ಮಚ್ಚಿನಿಂದ ತಂದೆಯ ಕುತ್ತಿಗೆಗೆ ಇರಿದಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ಕೃಷ್ಣ ನಾಯ್ಕ್ ಅವರು ಮನೆಯಂಗಳದಲ್ಲಿ ಮೃತಪಟ್ಟಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಆರೋಪಿ ಉದಯ ನಾಯ್ಕ್ನನ್ನು ಬಂಧಿಸಲಾಗಿದೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.