ಮಂಗಳೂರು, ಡಿ 7 (Daijiworld News/MSP): ಜನಪ್ರಿಯ ಭಾಗವತ ಪಟ್ಲ ಸತೀಶ್ ಶೆಟ್ಟಿ ಮತ್ತು ಮೇಳದ ಯಜಮಾನರ ನಡುವೆ ಇದ್ದ ಅಸಮಾಧಾನ, ಮೇಳದ ತಿರುಗಾಟದ ಮೊದಲನೇ ಹರಕೆಯಾಟದಂದು ಬಹಿರಂಗಗೊಂಡು ಕಟೀಲು ಮೇಳದಿಂದ ಅವರನ್ನು ಹೊರಕಳುಹಿಸಿದ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರು ಇಂದು (ಡಿ ೦೭ ಶನಿವಾರ ) ಕಟೀಲು ದೇಗುಲದ ಆಡಳಿತ ಮಂಡಳಿ, ಯಕ್ಷಗಾನ ಮೇಳಗಳ ಸಂಚಾಲಕರು, ಮತ್ತು ಪಟ್ಲಾ ಸತೀಶ್ ಶೆಟ್ಟಿ ಜತೆ ಸಮಾಲೋಚನೆ ನಡೆಸಿ ಸಂಧಾನ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಪಟ್ಲ ಸತೀಶ್ ಶೆಟ್ಟಿ ಅವರು ಈ ಹಿಂದಿನಂತೆ ಮೇಳದಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಈ ಹಿಂದೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಅವರು ಎರಡೂ ಕಡೆಯವರಿಗೆ ಆಹ್ವಾನಿಸಿ ಮಾತುಕತೆ ನಡೆಸಿ ಸೌಹರ್ದಯುತವಾಗಿ ವಿವಾದ ಬಗೆಹರಿಸುವ ಪ್ರಯತ್ನ ಮಾಡಲಿದ್ದಾರೆ ಎನ್ನಲಾಗಿದೆ.
ಈ ಘಟನೆ ಬಹಿರಂಗವಾಗುತ್ತಲೇ " ಪ್ರಕರಣವನ್ನು ಸೌಹರ್ದಯುತವಾಗಿ ಮಾತುಕತೆ ಮೂಲಕ ಬಗೆಹರಿಸಲು ಪ್ರಯತ್ನಿಸುತ್ತೇವೆ" ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರು ಪ್ರತಿಕ್ರಿಯಿಸಿದ್ದರು.