ಮಂಗಳೂರು, ಡಿ 7(Daijiworld News/MSP): ಕೊಣಾಜೆ ಕುಂಟಾಲಗುಳಿ ಬಳಿ ಬೀದಿನಾಯಿಗಳ ದಾಳಿಗೆ ಹಸುವೊಂದು ಬಲಿಯಾದ ಘಟನೆ ಡಿ.06 ರ ಶುಕ್ರವಾರ ಸಂಭವಿಸಿದೆ. ಕೊಣಾಜೆ ಕುಂಟಾಲಗುಳಿಯ ಬಿಸಿಎಂ ಹಾಸ್ಟೇಲ್ ನ ಹಿಂಬದಿಯ ಗುಡ್ಡ ಪ್ರದೇಶದಲ್ಲಿ ಸ್ಥಳೀಯ ಮನೆಯ ವ್ಯಕ್ತಿಯೊಬ್ಬರ ಹಸುವನ್ನು ಮೇಯಲು ಬಿಡಲಾಗಿತ್ತು.
ಶುಕ್ರವಾರದಂದು ಮಧ್ಯಾಹ್ನ ಇಲ್ಲೇ ಇದ್ದ ಹತ್ತಕ್ಕಿಂತಲೂ ಹೆಚ್ಚು ಇದ್ದ ನಾಯಿಗಳ ಗುಂಪು ದನದ ಮೇಲೆ ದಾಳಿ ನಡೆಸಿ ಯದ್ವಾತದ್ವಾ ಕಚ್ಚಿ ಗಂಭೀರ ಗಾಯಗೊಳಿಸಿತ್ತು. ಬಳಿಕ ಸ್ಥಳೀಯರು ದನಕ್ಕೆ ಚಿಕಿತ್ಸೆ ನೀಡಲು ಯತ್ನಿಸಿದರೂ ಗಂಭೀರ ಗಾಯದಿಂದ ಹಸು ಸಾವನ್ನಪ್ಪಿದೆ. ಇದೀಗ ನಾಯಿಗಳ ಕಾಟದಿಂದಾಗಿ ಈ ಭಾಗದ ಜನರು ಭಯಪಡುವಂತಾಗಿದೆ.