ಮಂಗಳೂರು, ಡಿ 12 (Daijiworld News/MB) : ವಿವಾಹದ ಸಂದರ್ಭದಲ್ಲಿ ಸಿಹಿ ತಿಂಡಿ ನೀಡುವಾಗ ಸಾಮಾನ್ಯವಾಗಿ ಪ್ಲಾಸ್ಟಿಕ್ ಡಬ್ಬದಲ್ಲಿ ನೀಡುತ್ತಾರೆ. ಆದರೆ ಇಲ್ಲೊಂದು ವಿವಾಹದಲ್ಲಿ ಪ್ಲಾಸ್ಟಿಕ್ ಬದಲಾಗಿ ಪರಿಸರ ಸ್ನೇಹಿಯಾದ ಅರೆಕಾನಟ್ ಬಾಕ್ಸ್ಗಳಲ್ಲಿ ಸಿಹಿ ಹಂಚಿದ್ದು ಇದನ್ನು ಶಾಸಕ ವೇದವ್ಯಾಸ್ ಕಾಮತ್ರವರು ಟ್ವೀಟ್ ಮಾಡಿದ್ದಾರೆ.
ನೇಹಾ ಹಾಗೂ ವಿನಾಯಕ್ ಎಂಬವರ ವಿವಾಹ ಇಂದು ಸಂಘನಿಕೇತನದಲ್ಲಿ ನಡೆದಿದ್ದು ವಿವಾಹ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ಲಾಸ್ಟಿಕ್ ಮುಕ್ತ ಮಂಗಳೂರಿನ ಸಂದೇಶ ನೀಡಿದ್ದಾರೆ.
ವಿವಾಹ ಸಮಾರಂಭದಲ್ಲಿ ಭಾಗವಹಿಸಿದ ಶಾಸಕ ವೇದವ್ಯಾಸ್ ಕಾಮತ್ ಈ ಕುರಿತು ಟ್ವೀಟ್ ಮಾಡಿದ್ದು ಸಂತೋಷ ವ್ಯಕ್ತ ಪಡಿಸಿದ್ದಾರೆ.
ಆ ಸಿಹಿ ತಿಂಡಿಯ ಡಬ್ಬದ ಮೇಲೆ ಪರಿಸರ ಸಂರಕ್ಷಿಸಿ, ಪ್ಲಾಸ್ಟಿಕ್ ಬಳಕೆ ಮಾಡದಿರಿ ಎಂಬ ಸಂದೇಶವನ್ನು ಬರೆಯಲಾಗಿದೆ.