ಬಂಟ್ವಾಳ, ಡಿ 12(Daijiworld News/MB): ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ರಜಾಕ್ ರವರ ಮೇಲೆ ನಡೆದ ಹತ್ಯೆ ಯತ್ನಕ್ಕೆ ಸಂಬಂಧಿಸಿ ಪೊಲೀಸರು 3 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕುಕ್ಕಾಜೆ ಗ್ರಾಮದ ನಿವಾಸಿಗಳಾದ ಬಶಿರ್ (27), ಕಬೀರ್ (23) ಹಾಗೂ ತನ್ವಿರ್ (23) ಎಂಬುವವರನ್ನು ಬಂಧಿತ ಆರೋಪಿಗಳು.
ಗ್ರಾಮ ಪಂಚಾಯತ್ ಅಧ್ಯಕ್ಷ ರಝಾಕ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ, ಮಂಚಿ ಗ್ರಾಮದ ಮಂಚಿ ಕಟ್ಟೆಯಲ್ಲಿರುವ ಕ್ಲಿನಿಕ್'ವೊಂದಕ್ಕೆ ನವೆಂಬರ್ 30ರ ಶನಿವಾರ ರಾತ್ರಿ ತೆರಳಿದ್ದು ಈ ವೇಳೆ ಬೈಕ್'ನಲ್ಲಿ ಬಂದ ತಂಡ ಏಕಾಏಕಿ ರಝಾಕ್ ಅವರಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದು ಅವರನ್ನು ಆಸ್ಪತ್ರಗೆ ದಾಖಲಿಸಲಾಗಿತ್ತು.
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.