ಮಂಗಳೂರು, ಡಿ 13(Daijiworld News/MSP): ಬೆಳಗ್ಗೆ 8 ಗಂಟೆಯವರೆಗೆ ಹಾಸಿಗೆಯಿಂದ ಎದ್ದೇಳದ ಯುವ ಜನತೆ ಇವರನ್ನು ನೋಡಿ ನಾಚಿಕೊಳ್ಳಬೇಕು. ಇಳಿವಯಸ್ಸಾದರೂ ಅಧಮ್ಯ ಜೀವನೋತ್ಸಹ, ಸದಾ ಕ್ರಿಯಾಶೀಲ ವ್ಯಕ್ತಿತ್ವ ಇವರದ್ದು.
ಇವರೇ ಜೆ.ಜಿ ಗೊನ್ಸಲ್ವಿಸ್ ವಯಸ್ಸು ಕೇವಲ ನೂರಕ್ಕೆ ಎರಡು ಕಮ್ಮಿ, ಅಂದ್ರೆ 98 ಅಷ್ಟೇ. ನೀವು ಮಂಗಳೂರು ನಗರದಲ್ಲಿ ಓಡಾಡುವ ವಾಹನ ಸವಾರರಾಗಿದ್ರೆ ಇವರನ್ನೊಮ್ಮೆಯಾದರೂ ನೋಡಿರ್ತೀರಾ.. ಯಾಕೆಂದರೆ ಈ ಇಳಿವಯಸ್ಸಿನಲ್ಲಿಯೂ ಅಷ್ಟೇ ತಾಳ್ಮೆಯಿಂದ ಸಂಚಾರ ದಟ್ಟನೆ ನಿಯಂತ್ರಿಸುತ್ತಾ "ಟ್ರಾಫಿಕ್ ವಾರ್ಡನ್" ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಟ್ರಾಫಿಕ್ ವಾರ್ಡನ್ ಜೆ.ಜಿ ಗೊನ್ಸಲೆಸ್ ಅವರು ಅಮೇರಿಕಾದಲ್ಲಿ ವೃತ್ತಿ ಜೀವನ ನಡೆಸಿ ನಿವೃತ್ತಿ ಬಳಿಕ ತಮ್ಮೂರು ಮಂಗಳೂರಿನಲ್ಲಿ ನೆಲೆನಿಂತರು. ಶಿಸ್ತುಬದ್ದವಾಗಿ ಜೀವನ ನಡೆಸುವ ಇವರು, ವಾಹನ ಸವಾರರು ಎಲ್ಲೆಂದರಲ್ಲಿ ಪಾರ್ಕ್ ಮಾಡೋದು, ಎಡ ಬದಿಯಿಂದ ಓವರ್ ಟೇಕ್ ಮಾಡುವುದು , ಸಂಚಾರ ದಟ್ಟಣೆ ಇಂತಹ ಸಮಸ್ಯೆಗಳನ್ನು ದಿನ ನಿತ್ಯ ನೋಡಿ ಕೊನೆಗೆ ತಾವೇ ಮುಂದೆ ಬಂದು ಪೊಲೀಸ್ ಇಲಾಖೆಯ ಒಪ್ಪಿಗೆ ಪಡೆದು, ತಮ್ಮ ದೈನಂದಿನ ಎರಡು ತಾಸು ಟ್ರಾಫಿಕ್ ನಿಯಂತ್ರಣ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ.
ರಿಟೈಡ್ ಲೈಫ್ ನ್ನೂ ಸದುಪಯೋಗಪಡಿಸಿಕೊಳ್ಳಿ ಎನ್ನುವ ಇವರ ತಂಡದಲ್ಲಿ ,ಮೇವಿಸ್ ರೊಡ್ರಿಗಸ್, ಮೇರಿ ಪಿರೇರಾ 10 ಮಂದಿ ಸದಸ್ಯರಿದ್ದು ಇವರೆಲ್ಲಾ ,ಕದ್ರಿ,ನಂತೂರು, ಸ್ಟೇಟ್ ಬ್ಯಾಂಕ್,ಬಲ್ಮಠ,ಹಾಗೂ ಇನ್ನಿತರ ಸ್ಥಳಗಳಲ್ಲಿ ತಮ್ಮ ಸೇವೆ ಮಾಡಲು ದಿನನಿತ್ಯ ರಸ್ತೆಗಳಿಯುತ್ತಾರೆ ,ಈಗಿನ ಸಮಾಜದಲ್ಲಿ ಇಂತಹ ಸೇವೆ ಮಾಡುವವರಿಗೆ ಒಂದು ಸೆಲ್ಯೂಟ್.