ಉಪ್ಪಿನಂಗಡಿ, ಡಿ 13(Daijiworld News/MSP): ಮಧ್ಯಪ್ರದೇಶದಿಂದ ಅಪ್ರಾಪ್ತ ಬಾಲಕಿಯರಿಬ್ಬರನ್ನು ಕಿಡ್ನಾಪ್ ಮಾಡಿ ಉಪ್ಪಿನಂಗಡಿ ಪರಿಸರದಲ್ಲಿ ವಾಸವಾಗಿದ್ದ ಯುವಕರಿಬ್ಬರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ಮಧ್ಯಪ್ರದೇಶದ ಪೊಲೀಸರು ಅಪಹರಣಕ್ಕೆ ಒಳಗಾಗದ ಬಾಲಕಿಯರ ಶೋಧ ಕಾರ್ಯ ನಡೆಸಿದಾಗ ಸುಳಿವು ದೊರಕ್ಕಿತ್ತು. ಈ ಹಿನ್ನಲೆಯಲ್ಲಿ ಉಪ್ಪಿನಂಗಡಿ ಪೊಲೀಸರ ಸಹಕಾರದಿಂದ ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.
ಮಧ್ಯಪ್ರದೇಶ ರಾಜ್ಯದ ಬಸಂತ್ ಸಿರ್ಸಾಗೆ(21) ಎಂಬಾತ ಇನ್ನೋರ್ವ 17 ರ ಹರೆಯದ ಯುವಕ ತಮ್ಮ ಊರಿನ ಇಬ್ಬರು ಬಾಲಕಿಯರನ್ನು ಅಪಹರಿಸಿ ಕಾರ್ಮಿಕರಾಗಿ ವಾಸ್ತವ್ಯದಲ್ಲಿ ಇದ್ದ ತನ್ನ ಸ್ನೇಹಿತರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪ್ರಕರಣದ ಜಾಡು ಹಿಡಿದಿದ್ದ ಮಧ್ಯಪ್ರದೇಶದ ಪೊಲೀಸರು ತಮಗೆ ಸಿಕ್ಕಿರುವ ಮಾಹಿತಿ ಆಧಾರದಲ್ಲಿ ಉಪ್ಪಿನಂಗಡಿಗೆ ಬಂದು ಯುವಕರು ಮತ್ತು ಬಾಲಕಿಯರನ್ನು ಪತ್ತೆಹಚ್ಚಿ ಕರೆದೊಯ್ದಿದ್ದಾರೆ.