ಮಂಗಳೂರು, ಡಿ 13(Daijiworld News/MSP): ಲಾಕ್ ಮಾಡಿ ನಿಲ್ಲಿಸಿದ್ದ ಕಾರಿನ ಹಿಂಬದಿ ಸೀಟಿನ ಕಿಟಕಿ ಗಾಜು ಪುಡಿಗೈದು ಕಾರಿನೊಳಗಿಡಲಾಗಿದ್ದ 15 ಲಕ್ಷ ಹಣವನ್ನು ದರೋಡೆ ನಡೆದ ಘಟನೆ ನಗರದ ಚಿಲಂಬಿಯಲ್ಲಿ ಡಿ.13 ರ ಶುಕ್ರವಾರ ನಡೆದಿದೆ. ಹಣದ ವಾರೀಸುದಾರರು ಹಣದ ಸೌತ್ ಇಂಡಿಯಾ ಬ್ಯಾಂಕ್ ಬಂದಿದ್ದರು ಎಂದು ತಿಳಿದುಬಂದಿದೆ.
ಕೆ ಎ 03ಎಂವೈ 4390 ನೋಂದಣಿಯ ಕಪ್ಪು ಬಣ್ಣದ ಹುಂಡೈ ಐ 10 ಕಾರಿನಲ್ಲಿ ಕಾರಿನಲ್ಲಿ ಹಣವಿರಿಸಲಾಗಿತ್ತು ಎಂದು ತಿಳಿದುಬಂದಿದ್ದು, ಬೈಕಿನಲ್ಲಿ ಬಂದ ಹೆಲ್ಮಟ್ ಧರಿಸಿದ್ದ ಇಬ್ಬರು ಕಾರಿನ ಗಾಜು ಪುಡಿಗೈದು ದರೋಡೆ ನಡೆಸಿದ್ದಾರೆ. ಈ ಕೃತ್ಯ ಸಿ.ಸಿ ಟಿವಿಯಲ್ಲಿ ಸೆರೆಯಾಗಿದ್ದು ಬರ್ಕೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ. ಹಣ ಹಾಗೂ ಕಾರಿನ ವಾರೀಸುದಾರರ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.