ಕಾಸರಗೋಡು, ಡಿ 13(Daijiworld News/MSP): ಹದಿನಾಲ್ಕರ ಹರೆಯದ ಅಪ್ರಾಪ್ತೆ ಬಾಲಕಿಗೆ ವಿವಾಹ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗೆ ಪೋಕ್ಸೋ ಕಾಯ್ದೆಯಂತೆ ಹತ್ತು ವರ್ಷ ಕಠಿಣ ಸಜೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ಕಾಸರಗೋಡು ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಫು ನೀಡಿದೆ.
ಬಂದ್ಯೋಡು ಕುಬಣೂರಿನ ಯಶವಂತ ಯಾನೆ ಅಪ್ಪು (35) ಶಿಕ್ಷೆಗೊಳಗಾದ ಆರೋಪಿ 2014 ರ ಡಿಸಂಬರ್ ನಿಂದ 2015 ರ ಜನವರಿ 19ರ ತನಕ ಹಲವು ದಿನಗಳ ಕಾಲ ಬಾಲಕಿ ಮೇಲೆ ದೌರ್ಜನ್ಯ ನಡೆಸಿದ್ದು , ಜನವಾಸವಿಲ್ಲದ ಮನೆಗೆ ಕರೆದೊಯ್ದು ಕೃತ್ಯ ನಡೆಸಿರುವುದಾಗಿ ಪ್ರಕರಣ ದಾಖಲಿಸಲಾಗಿತ್ತು.
ಬಾಲಕಿಯ ವರ್ತನೆಯಿಂದ ಸಂಶಯಗೊಂಡು ತಾಯಿ ವಿಚಾರಿಸಿದಾಗ ಗಮನಕ್ಕೆ ಬಂದಿದ್ದು, ಬಳಿಕ ಮಹಿಳಾ ಸೆಲ್ ಗೆ ದೂರು ನೀಡಲಾಗಿತ್ತು ಮಹಿಳಾ ಸೆಲ್ ನ ಮಾಹಿತಿ ಕಲೆ ಹಾಕಿ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದರು. ಬಾಲಕಿಯನ್ನು ಮಂಗಳೂರು ಹಾಗೂ ಇನ್ನಿತರ ಕಡೆಗೆ ಕರೆದೊಯ್ದಿರುವುದಾಗಿ ತನಿಖೆಯಿಂದ ತಿಳಿದುಬಂದಿತ್ತು.