ಮಂಗಳೂರು, ಡಿ 14 (Daijiworld News/MSP): ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವಾ ನಿರತ ಸಂಸ್ಥೆ ಫ್ರೆಂಡ್ಸ್ ಬಳ್ಳಾಲ್ಬಾಗ್ ಬಿರುವೆರ್ ಕುಡ್ಲ ಮಂಗಳೂರು ಸಂಸ್ಥೆಯು ಇದೀಗ ನೊಂದವರ ಕಣ್ಣಿರು ಒರೆಸುವ ಕೆಲಸವನ್ನು ಮಾಡುತ್ತಿರುವುದು ಪ್ರಶಂಸನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಬಜ್ಪೆ ಸುಂಕದಕಟ್ಟೆಯ ದಿನೇಶ್ ಪೂಜಾರಿ ಲತಾ ದಂಪತಿಯ ಪುತ್ರ ಓಂಶಿಕ್ ಮೆದುಳು ಜ್ವರದಿಂದ ಬಳಲುತ್ತಿದ್ದು ಈತನ ಚಿಕಿತ್ಸೆಗೆ ಶನಿವಾರ ಫ್ರೆಂಡ್ಸ್ ಬಳ್ಳಾಲ್ಬಾಗ್ ಬಿರುವೆರ್ ಕುಡ್ಲ ವತಿಯಿಂದ 50 ಸಾವಿರ ರೂ. ನೆರವಿನ ಚೆಕ್ಕನ್ನು ವಿತರಿಸಿ ಅವರು ಮಾತನಾಡಿದರು. ಸಂಘಟನೆಗಳು ಕೇವಲ ಸ್ಥಾಪಿಸಿದರೆ ಸಾಲದು ,ಸಮಾಜದ ಏಳಿಗೆಗೆ, ಬಡವರ ಕಷ್ಟಕ್ಕೆ ಸ್ಪಂಧಿಸುವ ಮನೋಭಾವ ಹೊಂದಿರಬೇಕು. ಕಳೆದ 6 ವರ್ಷಗಳಿಂದ ಬಿರುವೆರ್ ಕುಡ್ಲ ಉತ್ತಮ ಕೆಲಸ ಮಾಡುತ್ತಾ ಬಂದಿದೆ. ಸರಕಾರದ ವತಿಯಿಂದ ಈ ಸಂಸ್ಥೆಯನ್ನು ಗುರುತಿಸುವ ಕೆಲಸ ಮಾಡಲಾಗುವುದು. ಸ್ಥಾಪಕಾಧ್ಯಕ್ಷ ಉದಯಪೂಜಾರಿ ಹಾಗೂ ಇವರ ಸ್ನೇಹಿತರ ,ಹಿತೈಷಿಗಳ ಈ ಸೇವೆ ನಿರಂತರವಾಗಿ ಬಡ ವರ್ಗಕ್ಕೆ ಮುಂದುವರಿಯುವಂತಾಗಲಿ ಎಂದು ಹೇಳಿದರು.
ಈಗಾಗಲೇ 1.50 ಕೋಟಿ ರೂ. ಮೊತ್ತದ ವಿವಿಧ ಸವಲತ್ತು ಹಾಗೂ ಆರ್ಥಿಕ ಸಹಾಯವನ್ನು ಜಾತಿ,ವರ್ಗ ನೋಡದೆ ಮಾಡಲಾಗಿದೆ.ಮಕ್ಕಳ ಶಿಕ್ಷಣಕ್ಕೆ ನೆರವು ನೀಡಲಾಗಿದೆ. ಇದರಲ್ಲಿ ಹೆಚ್ಚಾಗಿ ಆರೋಗ್ಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವವರ ಆಸ್ಪತ್ರೆ, ಔಷಧ ವೆಚ್ಚಕ್ಕೆ ಹೆಚ್ಚಿನ ನೆರವು ನೀಡಿದ್ದೇವೆ. ನಮ್ಮ ಜಿಲ್ಲೆಯ ವಿವಿಧ ತಾಲೂಕಿನ ಬಿರುವೆರ್ ಕುಡ್ಲ ಸಹ ಸಂಘಟನೆಗಳು ,ಮಹಿಳಾ ಸಂಘಟನೆ ಹಾಗೂ ದುಬಾ ಘಟಕಗಳು ನೆರವು ನೀಡುತ್ತಿವೆ ಎಂದು ಸ್ಥಾಪಕಾಧ್ಯಕ್ಷ ಉದಯಪೂಜಾರಿ ಬಳ್ಳಾಲ್ಬಾಗ್ ಹೇಳಿದರು.ಸತೀಶ್ ಕುಂಪಲ,ಸದಾನಂದ ಪೂಜಾರಿ ,ವಸಂತ್ ಜೆ ಪೂಜಾರಿ,ರಾಕೇಶ್ ಪೂಜಾರಿ ,ಕಿಶೋರ್ ಬಾಬು ಕೋಡಿಕಲ್,ಲತೀಶ್ ಪೂಜಾರಿ ಬಳ್ಳಾಲ್ ಭಾಗ್ ,ಹರ್ಷ ಪೂಜಾರಿ ,ರಾಕೇಶ್ ಚಿಲಿಂಬಿ ,ಲೋಹಿತ್ ಗಟ್ಟಿ ,ಲಕ್ಷ್ಮೀಶ್ ಪೂಜಾರಿ ,ಸುರೇಶ್ ತುಕಾರಾಮ ಪವಾರ್ ,ಲಿಖಿತ್ ಕೋಟ್ಯಾನ್ ಕಾವೂರು ,ಕೀರ್ತನ್ ಪೂಜಾರಿ ಪದವಿನಂಗಡಿ,ಯತೀಶ್ ಬಳ್ಳಾಲ್ ಭಾಗ್ ,ಗೌತಮ್ ಪದವಿನಂಗಡಿ ,ರೋಹಿದಾಸ್ ಕದ್ರಿ,ರೆನಿತ್ ರಾಜ್ ಅಶೋಕ ನಗರ ,ರಾಮ್ ಪ್ರಸಾದ್ ಎಕ್ಕೂರು,ಚರಣ್ ಶೆಟ್ಟಿ ಕಾವೂರು
ಸುನಿಲ್ ಶೆಟ್ಟಿ ಬಳ್ಳಾಲ್ ಭಾಗ್ ,ಭವಿತ್ ರಾಜ್ ಅಶೋಕ್ ನಗರ ,ಪುಷ್ಪರಾಜ್,ಗಣೇಶ್ ಚಿಲಿಂಬಿಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.