ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಹೆಚ್ಚಾಗಿ ಪಂಚೆಯನ್ನೇ ನೆಚ್ಚಿಕೊಳ್ಳುತ್ತಾರೆ? ನಿಮಗೆ ಗೊತ್ತಾ.. ಇಲ್ಲಿದೆ ಸ್ವಾರಸ್ಯಕರ ಮಾಹಿತಿ. ಈ ವಿಷಯ ಬಹಿರಂಗ ಪಡಿಸುದ್ದು ಸ್ವತಃ ಮುಖ್ಯಮಂತ್ರಿಗಳೇ.. ಬೆಂಗಳೂರಿನ ವಾಣಿವಿಲಾಸ ಆಸ್ಪತೆಯ ನೆಪ್ರೋ ಯುರಾಲಜಿ ಸಂಸ್ಥೆಯ ನೂತನ ಕಟ್ಟಡ ಶಂಕುಸ್ಥಾಪನೆ ನೆರವೇರಿಸಿ (ಸೆ 15) ಮಾತನಾಡುತ್ತಿದ್ದ ಸಿದ್ದರಾಮಯ್ಯ, ಹಿಂದೆ ತಾವು ಕೂಡಾ ಪ್ಯಾಂಟೇ ಹಾಕೋತಾ ಇದ್ದು, ಆದರೆ ಚರ್ಮರೋಗದ ತೊಂದರೆ ಕಾಣಿಸಿಕೊಂಡ ನಂತರ ವೈದ್ಯರ ಸಲಹೆಯಂತೆ ಪಂಚೆ ಉಟ್ಟುಕೊಳ್ಳಲಾರಂಭಿಸಿದೆ ಎಂದು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.
ಇದನ್ನು ಸ್ವತಃ ಸಿಎಂ ವಿವರಿಸುವುದು ಹೀಗೆ, "ಸುಮಾರು 23 ವರ್ಷದ ಹಿಂದಿನ ಮಾತು.. ಅಂದ್ರೆ 1994ರಲ್ಲಿ ಚರ್ಮರೋಗ ಸಮಸ್ಯೆ ಕಾಣಿಸಿಕೊಂಡಾಗ ವೈದ್ಯರೊಬ್ಬರ ಬಳಿಗೆ ಹೋಗಿದ್ದೆ. ಆಯಪ್ಪಾ.. ಸಿಕ್ಕ ಸಿಕ್ಕ ಆಂಯಿಟ್ಮೆಂಟ್ ಎಲ್ಲಾ..ಬರೆದುಕೊಟ್ಟ. ಆಯಿಟ್ಮೆಂಟ್ ಹಚ್ಚಿಕೊಂಡಿದ್ದೇ ಬಂತು..ಸಮಸ್ಯೆಗೆ ಪರಿಹಾರ ಸಿಗ್ತಾ ಇರಲಿಲ್ಲ. ಕೊನೆಗೆ ಇನ್ನೊಬ್ಬ ವೈದ್ಯರ ಬಳಿಗೆ ಹೋದೆ.ಇದೆಲ್ಲಾ ಆಯಿಂಟ್ಮೆಂಟ್ ಬಿಟ್ಬಿಡಿ.. ಪ್ಯಾಂಟ್ ಬಿಟ್ಟು ಪಂಚೆ ಉಟ್ಕೊಳ್ಳಿ ಸಾರ್.. ಗಾಳೀನೂ ಓಡಾಡುತ್ತೆ, ನಿಮ್ಮ ಸಮಸ್ಯೆಗೂ ಪರಿಹಾರ ಸಿಗುತ್ತೆ ಅಂತಾ ಸಲಹೆ ನೀಡಿದರು. ಅಂದಿನಿಂದ ನೋಡಿ.. ನಾನು ಪಂಚೆ ಉಟ್ಕೊಳ್ಳಕ್ಕೆ ಆರಂಭಿಸಿದ್ದು ಎಂದು ಸಿದ್ದರಾಮಯ್ಯ ತನ್ನ ಪಂಚೆ ವಸ್ತ್ರಾಧಾರಣೆಯ ಕಥೆಯನ್ನು ಬಹಿರಂಗ ಪಡಿಸಿದರು.