ಕುಂದಾಪುರ,ಡಿ 16 (Daijiworld News/PY): ಹೆರಿಗೆ ಸಂದರ್ಭದಲ್ಲಿ ಆದ ಅಧಿಕ ರಕ್ತಸ್ರಾವದಿಂದಾಗಿ ಭಾನುವಾರ ಬಾಣಂತಿ ಸುಜಾತಾ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು ಸೋಮವಾರ ಸಾರ್ವಜನಿಕರು ಕುಂದಾಪುರದ ಸಾರ್ವಜನಿಕ ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಎಂಟು ತಿಂಗಳ ಗರ್ಭೀಣಿಯಾಗಿದ್ದಾಗ ನಡೆಸಲಾದ ಸ್ಕ್ಯಾನಿಂಗ್ ವರದಿಯಲ್ಲಿ ಸಾಮಾನ್ಯ ಹೆರಿಗೆ ಅಸಾಧ್ಯ ಎಂದು ನಮೂದಾಗಿದ್ದರೂ ಸಿಸಿಎರಿಯನ್ ಮಾಡದೇ ಬಾಣಂತಿ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಬಾಣಂತಿಯ ಮನೆಯವರಿ ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ, ಬಿಜೆಪಿ ಅಧ್ಯಕ್ಷ ಶಂಕರ ಅಂಕದಕಟ್ಟೆ ಮಾತನಾಡಿ, ಕಡುಬಡತನದ ಕುಟಂಬದಲ್ಲಿ ಸಂಸಾರದ ಆಸರೆಯಾಗಬೇಕಿದ್ದ ಯುವತಿಯ ಸಾವಿನಿಂದ ಕುಟುಂಬ ಕಂಗಾಲಾಗಿದ್ದು, ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು. ಮಹಿಳಾ ಸಾಂತ್ವಾನ ಕೇಂದ್ರದ ಅಧ್ಯಕ್ಷೆ ರಾಧಾದಾಸ್ ಕುಮಭಾಸಿ ಆಕ್ರೋಶ ವ್ಯಕ್ತಪಡಿಸಿ, ಮಹಿಳೆಯರನ್ನು ಮಾತ್ರವಲ್ಲ ಸಾವ್ಜನಿಕ ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳ ತಪಾಸಣೆ ನಡೆಸಬೇಕಾದ ವೈದ್ಯರು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಅಲ್ಲದೇ ರೋಗಿಗಳೊಂದಿಗೆ ನಿರ್ಲಕ್ಷ್ಯ ತೋರಿಸುತ್ತಾರೆ. ಇದರಿಂದಾಗಿಯೇ ಸುಜಾತ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿದರು. ಯುವತಿಯ ಮನೆಯವರು ನ್ಯಾಯ ದೊರಕಿಸಿಕೊಡುವಂತೆ ಮತ್ತು ಬಡ ಕುಟುಂಬಕ್ಕೆ ಆರ್ಥಿಕ ಪರಿಹಾರ ಒದಗಿಸುವಂತೆ ಆಗ್ರಹಿಸಿದರು.
ಬಳಿಕ ಪೊಲಿಸರ ಮಧ್ಯಪ್ರವೇಶದಲ್ಲಿ ಪ್ರತಿಭಟನಾಕಾರರ ನೇತೃತ್ವ ವಹಿಸಿಕೊಂಡವರ ಜೊತೆಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮಾತುಕತೆ ನಡೆಸಲು ಅವಕಾಶ ನೀಡಲಾಯಿತು. ಈ ಸಂದರ್ಭ ಪ್ರತಿಕ್ರಿಯಿಸಿದ ವೈದ್ಯಾಧಿಕಾರಿ ರಾಬಟ್ ರೆಬೆಬಲ್ಲೋ ನಮ್ಮ ವೈದ್ಯಕೀಯ ಸಿಬ್ಬಂದಿಗಳು ಕರ್ತವ್ಯ ಲೋಪ ನಡೆಸಿಲ್ಲ ಎಂದರು. ಸರ್ಕಾರದ ಯೋಜನೆಗಳಲ್ಲಿ ದೊರೆಯಬಹುದಾದ ಪರಿಹಾರಗಳನ್ನು ಮೃತ ಕುಟುಂಬಕ್ಕೆ ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವ ಭರವಸೆ ನಿಡಿದರು. ಹೆರಿಗೆ ವೈದ್ಯ ಡಾ. ರಜನಿ ಪ್ರತಿಕ್ರಿಯಿಸಿ ನಾನು ಪ್ರಾಮಾಣಿಕವಾಗಿ ಹೆರಿಗೆ ನಡೆಸಿದ್ದೇನೆ. ಶಸ್ತ್ರ ಚಿಕಿತ್ಸೆ ನಡೆಸಿದರೆ ಬಾಣಂತಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದ್ದು, ಸಾಮಾನ್ಯ ಹೆರಿಗೆ ಮಾಡಿಸಿದ್ದೇನೆ. ಮಗು ಕೂಡಾ ಆರೋಗ್ಯವಾಗಿದೆ. ತೀವ್ರ ರಕ್ತಸ್ರಾವವಾದುದರಿಂದ ಸಾವು ಸಂಭವಿಸಿದೆ ಎಂದರು.
ಆದರೆ ಪ್ರತಿಭಟನಾಕಾರರು ತುರ್ತು ಪರಿಹಾರ ನೀಡಲು ಆಗ್ರಹಿಸಿದಾಗ ಒಪ್ಪದ ವೈದ್ಯರು, ವೈದ್ಯೆ ರಜನಿಯವರ ಮೇಲೆ ಇಲಾಖೆ ತನಿಖೆಗೆ ಆದೇಶಿಸಿದೆ. ಹಾಗಾಗಿ ತನಿಖೆಯಲ್ಲಿ ತಪ್ಪು ಕಂಡು ಬಂದರೆ ಅವರ ವಿರುದ್ದ ಇಲಾಖೆ ಕ್ರಮಕೈಗೊಳ್ಳುತ್ತದೆ. ಆರ್ಥಿಕ ಪರಿಹಾರ ಕೊಡಲು ಅವಕಾಶವಿಲ್ಲ ಎಂದು ಎಂದು ವೈದ್ಯಾಧಿಕಾರಿ ಹೇಳಿದ ಬಳಿಕ ಸಂತ್ರಸ್ಥ ಕುಟುಂಬ ಕುಮದಾಪುರ ಪೊಲಿಸ್ ಠಾಣೆಯಲ್ಲಿ ದಊರು ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಮೃತ ಸುಜಾತ ಕುಟುಂಬಕ್ಕೆ ವಂತಿಕೆ ಮೂಲಕ ನೆರವು ಸಂಗ್ರಹಿಸಲು ಸ್ಥಳೀಯರು ನಿರ್ಧರಿಸಿದ್ದಾರೆ.