ಕುಂದಾಪುರ, ಡಿ 16 (DaijiworldNews/SM): ಕರ್ತವ್ಯ ಲೋಪ ಮತ್ತು ದುರ್ನಡತೆಯ ಹಿನ್ನಲೆಯಲ್ಲಿ ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ವರ್ಗಾವಣೆಗೊಂಡಿದ್ದಾರೆ. ವೈದ್ಯಾಧಿಕಾರಿ ಡಾ.ರಾಬರ್ಟ್ ರೆಬೆಲ್ಲೋ ಸದ್ಯ ವರ್ಗಾವಣೆಯ ಶಿಕ್ಷೆಗೆ ಗುರಿಯಾದವರು.
ಮಡಿಕೇರಿಯ ಚಿರಂಬಾಣಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಕ್ಷಣಕ್ಕೆ ಅನುಷ್ಠಾನಕ್ಕೆ ಬರುವಂತೆ ಡಾ.ರಾಬರ್ಟ್ ರೆಬೆಲ್ಲೋ ಅವರನ್ನು ಸರಕಾರಿ ಉಪಕಾರ್ಯದರ್ಶಿ ವರ್ಗಾವಣೆಗೊಳಿಸಿ ಆದೇಶ ನೀಡಿದ್ದಾರೆ. ಈ ಹಿಂದೆ ಕುಂದಾಪುರ ತಾಲೂಕು ಪಂಚಾಯತ್ ಸಭೆಯಲ್ಲೂ ಕೂಡ ವೈದ್ಯಾಧಿಕಾರಿ ಅವರ ಕಾರ್ಯಾವೈಖರಿ ಬಗ್ಗೆ ಅಸಮಧಾನ ವ್ಯಕ್ತವಾಗಿ ಅಮಾನತ್ತು ಶಿಕ್ಷಗೆ ಗುರಿಯಾಗಿದ್ದರು. ಇಂದು ಬಾಣಂತಿ ಸಾವು ಪ್ರಕರಣದ ಪ್ರತಿಭಟನೆಯ ಬೆನ್ನಿಗೆ ವೈದ್ಯಾಧಿಕಾರಿ ವರ್ಗಾವಣೆ ಯಾಗಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇನ್ನು ಈ ವೈದ್ಯಾಧಿಕಾರಿ ಈ ಹಿಂದೆ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದರು. ಬಳಿಕ ನ್ಯಾಯಾಂಗದ ಮೊರೆ ಹೋಗಿ ತಾನು ತಪ್ಪು ಮಾಡಿಲ್ಲ. ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತಿದೆ ಎಂಬುವುದಾಗಿ ಹೇಳಿ ಅವರು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ, ಇದೀಗ ಅವರಿಗೆ ವರ್ಗಾವಣೆಯ ಶಿಕ್ಷೆ ವಿಧಿಸಲಾಗಿದೆ.