Karavali
ಎಲ್ಲಕ್ಕಿಂತಲೂ ಭೂಮಿಯ ಆರೋಗ್ಯ ಮುಖ್ಯ- ಯುನಿಟಿ ಆಸ್ಪತ್ರೆಯ ಡಾ.ಸಿ.ಪಿ.ಹಬೀಬ್ ರಹ್ಮಾನ್
- Tue, Dec 17 2019 03:28:53 PM
-
ಮಂಗಳೂರು, ಡಿ 17 (Daijiworld News/PY) : ಜಾಗತಿಕಮಟ್ಟದಲ್ಲಿನ ಇಂದಿನ ಗಲಿಬಿಲಿ ವಾತಾವರಣದ ವಿಪ್ಲವವು, ವೈಯಕ್ತಿಕ ಮತ್ತು ಸಮುದಾಯ ಆರೋಗ್ಯಕ್ಕಿಂತ ಭೂಮಿಯ ಆರೋಗ್ಯ ಮುಖ್ಯ ಎನ್ನುವ ಎಚ್ಚರಿಕೆಯ ಸಂದೇಶವನ್ನು ಎಲ್ಲ ದೇಶಗಳ ಎಲ್ಲ ನಾಯಕರಿಗೆ ನೀಡಿದೆ ಎಂದು ಯುನಿಟಿ ಆಸ್ಪತ್ರೆಯ ಅಧ್ಯಕ್ಷ ಡಾ.ಸಿ.ಪಿ.ಹಬೀಬ್ ರಹ್ಮಾನ್ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದ ಹೂಸ್ಟನ್ ನವರ್ಲ್ಡ್ಕಾನ್ಫಿಡರೇಷನ್ ಆಫ್ಬ್ಯುಸಿನೆಸ್ಕೌಲಾಲಂಪುರದಲ್ಲಿ ಆಯೋಜಿಸಿದ್ದ ಎರಡು ದಿನಗಳ ಸಮ್ಮೇಳನದಲ್ಲಿ ಪಾಲ್ಗೊಂಡ 100ಕ್ಕೂ ಹೆಚ್ಚು ದೇಶಗಳ ವಿವಿಧ ಸಂಘಟನೆಗಳ ಮುಖಂಡರನ್ನು ಉದ್ದೇಶಿಸಿ ಅವರು ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಅನುಕೂಲಕರ ಭವಿಷ್ಯವನ್ನು ಅಭಿವೃದ್ಧಿಪಡಿಸುವ ಸಂಘಟಿತ ಪ್ರಯತ್ನದ ಬಗ್ಗೆ ಈ ಸಮ್ಮೇಳನದಲ್ಲಿ ಚರ್ಚೆನಡೆಯಲಿದೆ. ಹದಿನೈದು ವರ್ಷ ಹಳೆಯ ವರ್ಲ್ಡ್ಕಾನ್ಫಿಡರೇಷನ್ ಆಫ್ಬ್ಯುಸಿನೆಸ್ಸಂಘಟನೆಯನ್ನು 'ವರ್ಲ್ಡ್ಕಾಬ್' (WORLDCOB) ಎಂದು ಕರೆಯಲಾಗುತ್ತಿದ್ದು, ಇದು 130 ದೇಶಗಳ 3,500ಕ್ಕೂಹೆಚ್ಚು ಸದಸ್ಯ ಸಂಘಟನೆಗಳನ್ನು ಹೊಂದಿದೆ. ಈಸಂಘಟನೆಗಳು ಪರಸ್ಪರ ಸಹಭಾಗಿತ್ವದ ಬಗೆಗೆ ತಮ್ಮ ಯೋಚನೆಗಳನ್ನುಈ ವೇದಿಕೆಯಲ್ಲಿ ಹಂಚಿಕೊಳ್ಳಲಿದೆ.
ಸ್ಫೂರ್ತಿದಾಯಕ ನಾಯಕತ್ವಕ್ಕಾಗಿ ಡಾ. ಹಬೀಬ್ ರಹ್ಮಾನ್ ಅವರಿಗೆ ಈ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ವಿಜೇತರ ಪೈಕಿ ಡಾ. ಹಬೀಬ್ ರಹ್ಮಾನ್ ಏಕೈಕ ಭಾರತೀಯ. 130 ದೇಶಗಳ 150 ಮಂದಿ ಗಣ್ಯರು ಇದರಲ್ಲಿ ಭಾಗವಹಿಸಿದ್ದರು.
ಡಾ. ಹಬೀಬ್ ರಹ್ಮಾನ್ ಅವರು 'ಭೂಮಿಯ ಆರೋಗ್ಯ' ಎಂಬ ಪರಿಕಲ್ಪನೆ ಬಗ್ಗೆ ವಿಚಾರ ಮಂಡಿಸಿದರು. ವಿವಿಧೆಡೆಗಳಿಂದ ಆಗಮಿಸಿದ್ದ ಪ್ರತಿನಿಧಿಗಳು ಡಾ. ಹಬೀಬ್ ರಹ್ಮಾನ್ ಅವರ ಪರಿಕಲ್ಪನೆ ಮತ್ತು ವಿಚಾರವನ್ನು ಶ್ಲಾಘಿಸಿದರು.
'ಭೂಮಿಯ ಆರೋಗ್ಯ'ದ ಸಮಸ್ಯೆಯು ಜಾಗತಿಕ ಸಮಸ್ಯೆಯಾಗಿದ್ದು, ಪರಿಹಾರವನ್ನು ಕೂಡಾ ಜಾಗತಿಕವಾಗಿ ಪರಿಗಣಿಸಬೇಕಿದೆ. ಜಾಗತಿಕವಾಗಿ ಒಪ್ಪಿಕೊಂಡ ಪರಿಹಾರಗಳನ್ನು ಅನುಷ್ಠಾನಗೊಳಿಸುವ ಕಾರ್ಯ ಸ್ಥಳೀಯ ಮಟ್ಟದಲ್ಲಿ, ಸಮುದಾಯ ಮಟ್ಟದಲ್ಲಿ ಮತ್ತು ಸಾಂಸ್ಥಿಕ ಮಟ್ಟದಲ್ಲಿ ಆಗಬೇಕಿದೆ ಎಂದು ಡಾ.ಹಬೀಬ್ನುಡಿದರು. ಈ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲು ಪ್ರತಿಯೊಬ್ಬರೂ ವೈಯಕ್ತಿಕವಾಗಿ ಮತ್ತು ಸಂಘಟಿತವಾಗಿ ಮುಂದೆ ಬರಬೇಕಿದೆ ಎಂದು ಅವರು ಸಲಹೆ ನೀಡಿದರು.ಭೂಮಿಯ ಆರೋಗ್ಯದ ನಿಟ್ಟಿನಲ್ಲಿ ಇಟ್ಟ ಪ್ರತಿ ಹೆಜ್ಜೆಯೂ ಅಪಾರ ಪ್ರತಿಫಲ ನೀಡುತ್ತದೆ. ದೇಶದ ಯಾವುದೇ ಮೂಲೆಯಲ್ಲಿ ನಡೆಯುವ ಸಣ್ಣ ಉತ್ತಮ ಕೆಲಸಕ್ಕೆ ಕೂಡಾ ನಾವು ಮಹತ್ವ ನೀಡಬೇಕಿದೆ. ಪ್ರತಿಯೊಬ್ಬರೂ ತಮ್ಮ ಅಲ್ಪ ಪ್ರಯತ್ನವನ್ನು ಮಾಡುವ ಮೂಲಕ, ಇಡೀ ಜಾಗತಿಕ ಸಮಾಜ ಸೃಷ್ಟಿಸಿರುವ ಸಾಗರೋಪಾದಿ ಸಮಸ್ಯೆಗಳನ್ನು ಬಗೆಹರಿಸಲು ಕೊಡುಗೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಭೂಮಿ ಒಂದು ಸೂಪರ್ ಸಾನಿಕ್ವಿಮಾನವಿದ್ದಂತೆ. ಭೂಗ್ರಹವು ಸೂರ್ಯನ ಸುತ್ತಸುತ್ತುವ ಕಕ್ಷೆಯ ವೇಗ ಗಂಟೆಗೆ 1,07,000 ಕಿಲೋಮೀಟರ್ ಗಳು. ಇಷ್ಟೊಂದು ಕಲ್ಪನಾತೀತ ವೇಗದಲ್ಲಿ ಸುತ್ತುತ್ತಿರುವ ಭೂಮಿ ಹೇಗೆ ಸ್ಥಿರವಾಗಿದೆ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಭೂಗ್ರಹದ ಸಂರಚನೆಯಲ್ಲಿ ಆಗುವ ಯಾವುದೇ ತಪ್ಪುಗಳಿಂದ ಭೂಮಿಯು ಎಂದಿಗೂ ನಾಶವಾಗದು. ಆದರೆ ನಮ್ಮ ಸ್ವ ಹಿತಾಸಕ್ತಿಯ ಸ್ವಾರ್ಥದಿಂದಾಗಿ ಭೂಮಿಯು ನಾಶವಾಗುವ ಅಪಾಯವಿದೆ. ಭೂಮಿಯ ಸ್ಪಂದನೆಯಿಂಲೇ ನಾವು ಪಾಠಕಲಿತುಕೊಳ್ಳಬೇಕು. ಹವಾಮಾನ ಬದಲಾವಣೆಯು ಇದಕ್ಕೊಂದು ಉದಾಹರಣೆಯಾಗಿದ್ದು, ಇಡೀಯೂರೋಪ್ಖಂಡವೇ ಮುಳುಗುವ ಭೀತಿಯಲ್ಲಿದೆ ಎಂದು ವಿವರಿಸಿದರು.
ಭೂಮಿಯ ಯಾವ ಭಾಗವೂ ಇಂದು ಸುರಕ್ಷಿತ ಸ್ಥಳವಾಗಿ ಉಳಿದುಕೊಂಡಿಲ್ಲ. ಇದಕ್ಕೆ ಮುಖ್ಯ ಕಾರಣ ಮನುಕುಲದ ಮೂರುವಿಧದ ಸಂಪರ್ಕ ಕಡಿತಗಳು. ಮುಖ್ಯವಾಗಿ ನಾವು ಪ್ರಕೃತಿಯಿಂದ ಸಂಬಂಧ ಕಡಿದುಕೊಂಡಿದ್ದೇವೆ. ಸಹಮಾನವನಿಂದಲೂ ನಾವು ಸಂಪರ್ಕ ಕಡಿದುಕೊಂಡಿದ್ದೇವೆ. ಇವೆಲ್ಲದರ ಜತೆಗೆ ಇಂದು ನಾವು ನಮ್ಮ ಜತೆಗೇ ಸಂಬಂಧ ಕಡಿದುಕೊಂಡಿದ್ದೇವೆ. ಯಾವುದೇ ಯುದ್ಧ ಅಥವಾ ಹಿಂಸೆಗಿಂತ ಹೆಚ್ಚುಆತ್ಮಹತ್ಯೆಯಿಂದ ಸಾವುಗಳು ಜಗತ್ತಿನಲ್ಲಿ ಸಂಭವಿಸುತ್ತಿವೆ. ಇಡೀ ವಿಶ್ವ ಅಪಾಯಕಾರಿ ಸ್ಥಿತಿಯತ್ತ ಚಲಿಸುತ್ತಿದೆ.
ಹಣ, ಆಹಾರ, ಇಂಧನಕೊರತೆ, ಸಂಪನ್ಮೂಲದ ಅಭಾವ, ಹವಾಮಾನದ ವೈಪರಿತ್ಯ, ಸಮೂಹ ಬಡತನ, ಸಮೂಹ ವಲಸೆ, ಮೂಲಭೂತವಾದ, ಭಯೋತ್ಪಾದನೆ, ಹಣಕಾಸು ಪ್ರಭುತ್ವದಂಥ ಸಮಸ್ಯೆಗಳು ಎಲ್ಲಿ ನೋಡಿದರೂ ಮಿತಿ ಮೀರಿದೆ. ವಿಶ್ವ ಎತ್ತಸಾಗುತ್ತಿದೆ ಎನ್ನುವುದು ಯಾರಿಗೂ ತಿಳಿಯದು.
ನಾವು ಇಂದು ಅವ್ಯವಸ್ಥೆಯ ಯುಗವನ್ನು ಪ್ರವೇಶಿಸಿದ್ದೇವೆ.ಇಷ್ಟಾಗಿಯೂ ವೈಯಕ್ತಿಕ,ಸಾಮಾಜಿಕ ಅಥವಾ ಜಾಗತಿಕಮಟ್ಟದಲ್ಲಿ ಸುಧಾರಿಸುವ ಪ್ರಯತ್ನಗಳು ಇನ್ನೂ ವಾಸ್ತವವಾಗಿ ಕಾರ್ಯರೂಪಕ್ಕೆ ಬಂದಿಲ್ಲ. ಇದೀಗ ನಮ್ಮ ಸಮಯ. ನಾವು ಇರುವ ಪರಿಸ್ಥಿತಿಗೆ ನಾವು ಸ್ಪಂದಿಸಬೇಕಾಗಿದೆ. ಹಳೆಯ ನಾಗರಿಕತೆ ನಶಿಸುತ್ತಿದೆ. ನಾನು ಎನ್ನುವ ಮನೋಭಾವ, ಗರಿಷ್ಠ ವಸ್ತುಗಳ ಬಳಕೆ, ದೊಡ್ಡದೇ ಒಳ್ಳೆಯದು ಮತ್ತುನಮ್ಮನ್ನುಸಂಘಟಿತಬೇಜವಾಬ್ದಾರಿತನಕ್ಕೆತಳ್ಳಿದಸಮುದಾಯಚಾಲಿತನಿರ್ಧಾರಗಳು. ಇದುಅಂತಿಮವಾಗಿಯಾರೂಬಯಸದಫಲಿತಾಂಶವನ್ನುಸೃಷ್ಟಿಸುತ್ತದೆ.ಜನ ಪ್ರತ್ಯೇಕವಾಗಲು ಬಯಸಿದಂತೆ ಕಂಡುಬರುತ್ತಿದೆ ಹಾಗೂ ಸ್ವ-ಕೇಂದ್ರಿತರಾಗುತ್ತಿದ್ದಾರೆ. ಇತರರ ಹಿತಾಸಕ್ತಿ ಬಲಿಕೊಟ್ಟು ಲಾಭಪಡೆಯುವದನ್ನು ಬಹುತೇಕರು ಇಷ್ಟಪಡುತ್ತಿದ್ದಾರೆ. ಚಿಕ್ಕ-ಚೊಕ್ಕಎನ್ನುವ ವಾತಾವರಣ ಬದಲಾಗಿ ಇಡೀ ಮನುಕುಲ ಇಂದು 'ದೊಡ್ಡದೇ ಒಳ್ಳೆಯದು' ಎಂದು ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. "ನಾವು"ಎಂಬ ಮನೋಭಾವದ ಬದಲು "ನಾನು" ಎಂಬ ಅಂಶವೇ ಎಲ್ಲೆಡೆ ರಾರಾಜಿಸುತ್ತಿದೆ. ನಮ್ಮಸ್ವಾರ್ಥದ ಹಿತಾಸಕ್ತಿಗೆ ಇಡೀ ಭೂಗ್ರಹ ವಿನಾಶದತ್ತ ಸಾಗುವಂತಾಗಿದೆ ಎನ್ನುವ ಬಗ್ಗೆ ಯಾರಿಗೂ ಕಳಕಳಿ ಇಲ್ಲ. ಇಡೀ ಭೂಮಿಯೇ ವಿನಾಶದಂಚಿಗೆ ತಲುಪಿದರೆ ನಾವು ಎಲ್ಲಿ ಹೋಗಲು ಸಾಧ್ಯ?, ಈ ಬಗ್ಗೆ ನಾವು ವ್ಯಾಪಕವಾಗಿ ಯೋಚಿಸಬೇಕಾಗಿದೆ. ಇದು ಎಲ್ಲ ವ್ಯಕ್ತಿಗಳು, ಸಂಸ್ಥೆಗಳು ಮತ್ತು ರಾಷ್ಟ್ರಗಳು ಸೇರಿದಂತೆ ಪ್ರತಿಯೊಬ್ಬರಿಗೂ ಪ್ರಸಕ್ತ ಎನಿಸುವ ಪ್ರಶ್ನೆ. ಜಾಗತಿಕ ಪುನರುತ್ಥಾನದ ಕಾರ್ಯದಲ್ಲಿ ವಿಶ್ವದ ಪ್ರತಿಯೊಂದು ಮಗು ಕೂಡಾ ಪಾಲ್ಗೊಳ್ಳಬೇಕು. ಇದು ಏಕಕಾಲದಲ್ಲಿ ಸ್ವಯಂಪ್ರೇರಿತವಾಗಿ ಎಲ್ಲರಿಂದಲೂ ಆರಂಭವಾಗಬೇಕು. ಈ ಬಗೆಯ ಜವಾಬ್ದಾರಿಯುತ ಸ್ಪಂದನೆ ವಿಶ್ವದ ವಿವಿಧ ಭಾಗಗಳಲ್ಲಿ ಕಂಡು- ಕೇಳಿಬರುತ್ತಿದೆ. ಈ ಚುಕ್ಕೆಗಳನ್ನು ಸಂಪರ್ಕಿಸುವ ಅಗತ್ಯ ಇದ್ದು, ಒಟ್ಟಾರೆಯಾಗಿ ಒಟ್ಟು ಚಿತ್ರಣವನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.
ಇಂದಿನ ಆರ್ಥಿಕತೆಯು ಮಾನವನ ಅಹಮಿಕೆಯನ್ನಾಧರಿಸಿದೆ. ನಾವು ನಮ್ಮನ್ನುಇತರರ ಜತೆಗೆ ಹೋಲಿಸಿಕೊಳ್ಳುತ್ತೇವೆ. ನಾವು ನಮ್ಮ ಭೌತಿಕ ಸಂಪತ್ತನ್ನು ಇತರರ ಹಾಗೂ ಅವರ ಸಂಪತ್ತಿನ ಜತೆಗೆ ಹೋಲಿಕೆ ಮಾಡಿಕೊಳ್ಳಲು ಬಯಸುತ್ತೇವೆ. ಇದು ಅರ್ಥರಹಿತ. ಸುತ್ತಲಿನ ಪರಿಸರಕ್ಕೆ ಪ್ರತಿ ಮನುಷ್ಯನೂ ವಿಶಿಷ್ಟ ಹಾಗೂ ಪ್ರತಿಯೊಂದು ಕಥೆಯೂ ವಿಶಿಷ್ಟ ಮತ್ತು ವಿಶೇಷ.
ನಾವು ಹೊಸ ಪರಿಸರ ವ್ಯವಸ್ಥೆಯತ್ತ ಸಾಗುತ್ತಿದ್ದೇವೆ. ನಾವು ನಮ್ಮಲ್ಲೇ ನಮ್ಮ ತನವನ್ನು ಗುರುತಿಸಿಕೊಳ್ಳಬೇಕು ಮತ್ತು ನಮ್ಮ ಒಳಗಿನಿಂದಲೇ ನಮ್ಮಕಥೆಯನ್ನು ಆರಂಭಿಸಬೇಕು. ನಮ್ಮ ಆತ್ಮ-ಮನಸ್ಸು-ದೇಹದಸಂಬಂಧಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ನಾವು ಅಗಾಧ ಪ್ರಮಾಣದ ಸಂಬಂಧವನ್ನು ಅಂದರೆ ಪ್ರತಿಯೊಬ್ಬರೂ, ಎಲ್ಲರ ಜತೆಯೂ ಪರಸ್ಪರ ಸಂಬಂಧ ಕಲ್ಪಿಸಿಕೊಳ್ಳುವುದನ್ನುಅರ್ಥಮಾಡಿಕೊಳ್ಳಬೇಕು. ನಾವು ಜಗತ್ತಿನಿಂದ ಪ್ರತ್ಯೇಕವಾಗಿರಲು ಸಾಧ್ಯವಿಲ್ಲ. ನಮ್ಮ ಜೀವನದ ಒಂದು ಘಟಕಕ್ಕೆ ಏನಾಗುತ್ತದೆಯೋ ಅದು ಇಡೀ ಜೀವನದ ಮೇಲೆ ಮತ್ತು ಇಡೀ ವಿಶ್ವದ ಮೇಲೆ ಪರಿಣಾಮ ಬೀರುತ್ತದೆ.
ಪ್ರಾಣಿಗಳು ಇದನ್ನು ಮನುಷ್ಯರಿಗಿಂತಲೂ ಚೆನ್ನಾಗಿ ಅರ್ಥಮಾಡಿಕೊಂಡಿವೆ. ಅವುಗಳ ನಡವಳಿಕೆಯಿಂದ ನಾವು ಇದನ್ನು ಅರ್ಥಮಾಡಿಕೊಳ್ಳಬಹುದು. ಸಿಂಹಗಳು ತಮಗೆ ಹಸಿವಾದಾಗ ಮಾತ್ರ ಬೇಟೆಯಾಡುತ್ತವೆ. ಇತರ ಪ್ರಾಣಿಗಳ ಕಥೆಯೂ ಇದೇ ಆಗಿದೆ. ಆದರೆ ಮನುಷ್ಯ ಮಾತ್ರ ಭಿನ್ನವಾಗಿ ವರ್ತಿಸುತ್ತಾನೆ. ಇದೀಗ ನಮ್ಮ ದುರ್ನಡತೆಯ ದರ ಅತ್ಯಧಿಕ ಮಟ್ಟಕ್ಕೇರಿದೆ. ನಾವು ಊಹಿಸಲಸಾಧ್ಯರಾಗಿದ್ದೇವೆ.
ಇದೀಗ ಪ್ರಕೃತಿ ಮಾನವನ ದುರ್ನಡತೆಗೆ ಪ್ರತಿಯಾಗಿ ಪುಟಿದೇಳಲು ಆರಂಭಿಸಿದ್ದು, ಅದು ಕೂಡಾ ಅಷ್ಟೇ ಕಲ್ಪನಾತೀತ. ಈ ಬಗ್ಗೆ ಗಂಭೀರವಾಗಿ ಚಿಂತಿಸಲು ಇದು ಸಕಾಲ. ನಮ್ಮ ತಪ್ಪುಗಳನ್ನು ಮರುಕಳಿಸಲು ಮತ್ತೆ ಅವಕಾಶಗಳು ಸಿಗಲಾರವು.