ಬಂಟ್ವಾಳ, ಡಿ 17 (DaijiworldNews/SM): ಮುಂದಿನ ದಿನಗಳಲ್ಲಿ ಶಿಕ್ಷಕ ಸ್ನೇಹಿ ವರ್ಗಾವಣೆ ಕಾಯ್ದೆ ಅನುಷ್ಠಾನಕ್ಕೆ ತರಲು ಸರಕಾರ ಬದ್ಧವಿದೆ. ಮುಂಬರುವ ಅಧಿವೇಶನದಲ್ಲಿ ಪೆನ್ಷನ್ ಸ್ಕೀಮ್ ನ ಬಗ್ಗೆ ಪರಿಶೀಲಿಸಿ ಚರ್ಚಿಸಿ ಮುಂದಿನ ವಿಧಾನ ಸಭೆಯಲ್ಲಿ ಅನುಷ್ಠಾನಕ್ಕೆ ತರಲು ಸರಕಾರ ಚಿಂತನೆ ನಡೆಸಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದರು.
ಅವರು ಡಿಸೆಂಬರ್ 17ರ ಮಂಗಳವಾರ ವಾಮದಪದವಿನಲ್ಲಿ ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ವಾಮದಪದವು ಸರಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡದ ಉದ್ಘಾಟನೆ, ಕಾಲೇಜು ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕರ್ನಾಟಕದ ಎಲ್ಲಾ ಕಡೆಗಳಿಂದ ಬಂದರೂ ನಾವು ಶಿಕ್ಷಣ ನೀಡಲು ಸ್ವಾಗತ ನೀಡುವ ಮನಸ್ಥಿತಿ ಗೆ ಅಭಿನಂದನೆ ಎಂದು ಅವರು ಹೇಳಿದರು.
ವಾಮದಪದವು ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣದ ಕೌಶಲ್ಯಾಭಿವೃದ್ದಿ ಶಿಕ್ಷಣಕ್ಕಾಗಿ ಕೌನ್ಸೆಂಲಿಗ್ ಕೇಂದ್ರ ಸ್ಥಾಪನೆಯ ಬಗ್ಗೆ ಗಂಭೀರವಾಗಿ ಯೋಚನೆ ಮಾಡುತ್ತೇವೆ ಎಂದರು. ಪ್ರಾಕೃತಿಕ ವಿಕೋಪದಲ್ಲಿ ಹಾನಿಯಾದ ಶಾಲೆಗಳ ಅಭಿವೃದ್ಧಿಗಾಗಿ 3.90 ಲಕ್ಷ ಅನುದಾನ ಬಿಡುಗಡೆ ಮಾಡಿದ್ದೇವೆ. ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ರಾಜ್ಯದಲ್ಲಿ ಅದೇ ಮಾದರಿಯಲ್ಲಿ ಶಿಕ್ಷಣ ವ್ಯವಸ್ಥೆಗಾಗಿ ಯೋಚನೆಗಳು ಇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಸಿದ್ದ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಶಿಕ್ಷಣ ಇಲಾಖೆಗೆ ಉತ್ತಮ ಸಚಿವರನ್ನು ಪಡೆದಿದ್ದು, ದ.ಕ.ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.