ಉಡುಪಿ, ಡಿ 18(Daijiworld News/MB) : ಭಾರತ ದೇಶ ಭಾರತವಾಗಿ ಉಳಿಯಬೇಕು. ದೇಶದ ಜನತೆಯನ್ನು ಯಾವುದೇ ಧಾರ್ಮಿಕ ಆಧಾರದ ಮೇಲೆ ವಿಭಜನೆ ಮಾಡಲು ನಮ್ಮ ಸಂವಿಧಾನದಲ್ಲಿ ಅವಕಾಶ ನೀಡಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಮಣಿಪಾಲ ಜಿಲ್ಲಾಧಿಕಾರಿ ಮುಂಭಾಗ ಮಾತಾನಾಡಿದ ಅವರು "ಈ ಮಸೂದೆಯ ವಿಷಯದಲ್ಲಿ ದೇಶವನ್ನು ಧಾರ್ಮಿಕ ವಿಭಜನೆ ಮಾಡಿ ಬೆಂಕಿ ಹಚ್ಚುತ್ತಿದ್ದಾರೆ. ಸರಕಾರವೇ ದೇಶವನ್ನು ಹಾಳು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದಿರಾಗಾಂಧಿ ಸೃಷ್ಟಿಸಿದ ಬಾಂಗ್ಲಾದೇಶದಲ್ಲಿ ಜಿಡಿಪಿ 8.2% ಏರಿಕೆ ಕಂಡಿದೆ. ಆದರೆ ಭಾರತದಲ್ಲಿ ಜಿಡಿಪಿ 4.2% ಗೆ ಕುಸಿದಿದೆ. ಪ್ರಪಂಚದ ಬೇರೆ ಪರಿಣಾಮ ಬೇರದ್ದು ಭಾರತಕ್ಕೆ ಮಾತ್ರ ಹೇಗೆ ಪರಿಣಾಮ ಬೀರಿದೆ ಎಂದು ಪ್ರಶ್ನಿಸಿದರು.
ಮೋದಿ ಸರಕಾರ ದೇಶದ ಆರ್ಥಿಕ ಪರಿಸ್ಥಿತಿಯನ್ನು ಅಧೋಗತಿಗೆ ತಂದು ನಿಲ್ಲಿಸಿದ್ದಾಗಿದೆ. ಈಗ ಧಾರ್ಮಿಕವಾಗಿ ವಿಭಜನೆ ಮಾಡಿ ದೇಶವನ್ನು ಛಿದ್ರ ಛಿದ್ರ ಮಾಡಲು ಮುಂದಾಗಿದೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬದಿಗೆ ಸರಿಸಬೇಕು. ಆ ಬಳಿಕ ನೈತಿಕತೆ ಇದ್ದರೆ ಬಿಜೆಪಿ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
ನನ್ನಲ್ಲಿ ಪೌರತ್ವ ಖಚಿತ ಪಡಿಸಲು ಯಾರಾದರೂ ದಾಖಲೆಯನ್ನು ಕೇಳಿದರೆ, ನಾನು ತೋರಿಸುವುದಿಲ್ಲ. ಭಾರತೀಯನಾಗಿ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಯಾವುದಿದೆ? ನಾನು ದಾಖಲೆಯನ್ನು ಯಾಕೆ ಕೊಡಬೇಕು ಎಂದು ಸರಕಾರವನ್ನು ಪ್ರಮೋದ್ ಪ್ರಶ್ನಿಸಿದ್ದಾರೆ.