ಮಂಗಳೂರು, ಡಿ 18 (Daijiworld News/MSP): ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆಯನ್ನು ರಾಜ್ಯದಲ್ಲೂ ಜಾರಿಗೆ ಮಾಡುವ ವಿರುದ್ದ ಮಾಜಿ ಸಚಿವ ಯು.ಟಿ ಖಾದರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಯೋಗ ಮಾಡಲು ಕರ್ನಾಟಕದ ಜನರೇನು ಪ್ರಾಣಿಗಳಾ ? ಎಂದು ಪ್ರಶ್ನಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಡಿ.18ರ ಬುಧವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ, ಮಾಜಿ ಸಚಿವ ಯು.ಟಿ ಖಾದರ್ " ದೇಶದ ಭದ್ರತೆ ಬಗ್ಗೆ ಎಲ್ಲರಿಗೂ ಕಾಳಜಿ ಇದೆ. ದೇಶದ ಭದ್ರತೆ ವಿಚಾರದಲ್ಲಿ ಎಲ್ಲರೂ ಒಂದಾಗುತ್ತಾರೆ. ಆದರೆ ರಾಜ್ಯ ಸರ್ಕಾರವೂ ಮೊದಲು ಪೌರತ್ವ ಕಾಯ್ದೆ ಬಗ್ಗೆ ಕೂಲಂಕಷವಾಗಿ ಚರ್ಚೆ ನಡೆಸಿದ ಜನರಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಕಾಯ್ದೆ ಜಾರಿಯಾಗಲಿ. ಹೀಗಾದ್ರೆ ನಾವೆಲ್ಲಾ ಕಾಯ್ದೆಗೆ ಬೆಂಬಲ ನೀಡುತ್ತೇವೆ ಎಂದರು.
ಭಾವನಾತ್ಮಕ ವಿಚಾರದಲ್ಲಿ ಜನರಿಗೆ ಮೋಸ ಮಾಡುತ್ತಿದ್ದು, ರಾಜ್ಯ ಸರ್ಕಾರ ಜನರ ಸಮಸ್ಯೆಗಳತ್ತ ಹಾಗೂ ಅಭಿವೃದ್ದಿ ಯೋಜನೆಯತ್ತ ಗಮನ ನೀಡಿಲ್ಲ,ಸರ್ಕಾರ ಮೊದಲು ಜನರ ಅಭಿವೃದ್ಧಿ ವಿಚಾರದಲ್ಲಿ ಚರ್ಚೆ ಮಾಡಲಿ ಎಂದು ಹೇಳಿದರು.
ಬಿಜೆಪಿಯವರು ಪಾಕಿಸ್ತಾನದ ಹೆಸರಲ್ಲಿ ಮತ ಪಡೆದವರು, ಪೌರತ್ವ ಕಾಯ್ದೆ ಹಿಂದಿನ ಅಜೆಂಡಾ ಏನು ಅನ್ನುವುದನ್ನು ಮೊದಲು ತಿಳಿಸಲಿ
ಆಕ್ರೋಶ ವ್ಯಕ್ತಪಡಿಸಿದರು.