ಮೂಡಬಿದಿರೆ, ಡಿ 20 (Daijiworld News/PY) : ಮಂಗಳೂರಿನಲ್ಲಿ ಪೌರತ್ವ ಕಾಯ್ದೆಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಮತ್ತು ನಿಷೇಧಾಜ್ಞೆ ಹಿನ್ನೆಲೆ ಶನಿವಾರ ಮೂಡಬಿದಿರೆಯಲ್ಲಿ ನಡೆಯಬೇಕಿದ್ದ ಕಂಬಳ ಕೂಟವನ್ನು ಮುಂದಕ್ಕೆ ಹಾಕಲಾಗಿದೆ.
ಡಿ.21ರಂದು ಮೂಡಬಿದಿರೆಯ ಕಡಲಕೆರೆ ರಾಣಿ ಅಬ್ಬಕ್ಕ ನಿಸರ್ಗಧಾಮದಲ್ಲಿ ಕೋಟಿ-ಚೆನ್ನಯ ಜೋಡುಕರೆ ಕಂಬಳ ಮಾಡುವುದಾಗಿ ನಿರ್ಧರಿಸಲಾಗಿತ್ತು. ಆದರೆ, ಪೌರತ್ವ ಕಾಯ್ದೆಯ ವಿರುದ್ದವಾಗಿ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಸೆಕ್ಷನ್ 144 ಜಾರಿಯಲ್ಲಿರುವುದರಿಂದ ಶನಿವಾರ ನಡೆಯಬೇಕಿದ್ದ ಕಂಬಳ ಕೂಟವನ್ನು ಡಿಸೆಂಬರ್ 25 (ಬುಧವಾರ) ನಡೆಸಲು ತೀರ್ಮಾನಿಸಲಾಗಿದೆ ಎಂದು ಸಮಿತಿಯ ಅಧಿಕಾರಿಗಳು ತಿಳಿಸಿದ್ದಾರೆ.