ಬೆಳ್ತಂಗಡಿ, ಡಿ 20 (DaijiworldNews/SM): ಮಂಗಳೂರು-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಸಮೀಪ ಬೀಟಿಗೆ ಎಂಬಲ್ಲಿ ಪ್ರವಾಸಿಗರ ಮಿನಿ ಬಸ್ಸೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಗದ್ದೆಗೆ ಉರುಳಿ ಬಿದ್ದ ಪರಿಣಾಮ ಅದರಲ್ಲಿದ್ದ ಪ್ರಯಾಣಿಕರು ಗಾಯಗೊಂಡ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಮಹಾರಾಷ್ಟ್ರದ ಸೋಲಾಪುರದ ಮೊಹಲ್ ಹಾಗೂ ಬಿಜಾಪುರದ ಎರಡು ಕುಟುಂಬದ 18 ಮಂದಿ ಸದಸ್ಯರಿದ್ದ 12 ದಿನದ ಕರ್ನಾಟಕ ಪ್ರವಾಸಕ್ಕೆಂದು ಬೇಕಾದ ಬಟ್ಟೆ, ಅಡುಗೆ ಪರಿಕರ, ಗ್ಯಾಸ್ ಸಹಿತ ಹೊರಟಿದ್ದರು. ಬೇಲೂರಿಂದ ಧರ್ಮಸ್ಥಳಕ್ಕೆ ಬರುತ್ತಿದ್ದಾಗ ಮಿನಿ ಬಸ್ ಬೀಟಿಗೆ ಎಂಬಲ್ಲಿ ತಡೆಗೋಡೆ ಹಾಗೂ ಯಾವುದೇ ಮುನ್ಸೂಚನಾ ಫಲಕ ಇಲ್ಲದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ್ದು 4 ಮಂದಿ ಹೆಚ್ಚಿನ ಗಾಯಗೊಂಡಿದ್ದು ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಬಸ್ ಗದ್ದೆಗೆ ಉರುಳಿದ ಮಾಹಿತಿ ತಿಳಿದ ಸ್ಥಳೀಯರು ಹಾಗೂ ಪೋಲಿಸರು ತಕ್ಷಣ ಕಕ್ಕಿಂಜೆಯ ಶ್ರೀಕೃಷ್ಣ ಆಸ್ಪತ್ರೆ ಹಾಗೂ ಉಜಿರೆ ಎಸ್.ಡಿ.ಎಂ. ಆಸ್ಪತ್ರೆಗೆ ದಾಖಲಿಸಿದ್ದು, ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇವತಾ(49), ರತನ್(50), ಮಹಾನಂದಾ(50), ಶ್ರೀ ಶೈಲಿಯಾ (20) ಹೆಚ್ಚಿನ ಗಾಯಗೊಂಡು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದಂತೆ ಸೌದಾಗರ್(30), ನಂದ ಮಲ್ಲಿಕಾರ್ಜುನ(67), ಬಾಪೂ ರಾವ್(65), ಬಾಬೂ ರಾವ್(55), ಉಷಾ ಸಿದ್ದೇಶ್ವರ (67), ಗುರುಪಾದ್(32), ಸುಧಾ ಪಾಟೀಲ್(22), ಶೋಭಾ ಸಿದ್ದೇಶ್ವರ (57), ಹರೀಶ್ಚಂದ್ರ ಬಾವೂಕರ್(58), ಸಿದ್ದೇಶ್ವರ ಬಾವೂಕರ್(67), ಮಲ್ಲಿಕಾರ್ಜುನ (70), ಸಿದ್ದೇಶ್ವರ ರಾಮಚಂದ್ರ (67), ಬೇಬಿ ರಕ್ಷಾ(4), ಚಾಲಕ ಶಂಕರ್(25) ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಕಕ್ಕಿಂಜೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಘಟನೆಯ ಕುರಿತಂತೆ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದೆ.