ಕಾರ್ಕಳ, ಡಿ 21 (Daijiworld News/MSP): ಪೌರತ್ವ ಕಾಯಿದೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನವನ್ನು ಸಮಾನ ಉದ್ದೇಶವೊಂದಿರುವ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಮಾಡುತ್ತಾ ಬಂದಿರುವುದು ಸರಿಯಲ್ಲ. ಈ ಮಸೂದೆ ಪೌರತ್ವವನ್ನು ಕೊಡುವಂತಾಗಿದಾಗಿದೆಯೇ ಹೊರತು ಯಾವುದೇ ವ್ಯಕ್ತಿಯ ಪೌರತ್ವವನ್ನು ಕಸಿಯುವ ಉದ್ದೇಶವಿಲ್ಲ ಎಂದು ಶಾಸಕ ಹಾಗೂ ಸರಕಾರದ ಮುಖ್ಯ ಸಚೇತಕ ವಿ.ಸುನೀಲ್ ಹೇಳಿದರು.
ವಿಕಾಸ ಕಚೇರಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಸೂದೆಯ ಬಗ್ಗೆ ಅನಗತ್ಯ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ಹಾಗೂ ಇತರರು ನೀಡುತ್ತಿದ್ದಾರೆ. ಉತ್ತಮವಾದ ಈ ಮಸೂದೆಯನ್ನು ಜನರು ವಿರೋಧಿಸುವ ಹಿನ್ನಲೆಯಾದರೂ ಏನು? ಅದನ್ನು ಸ್ವಷ್ಟ ಮಾಡದೇ ಒಟ್ಟಾರೆ ದೇಶದಲ್ಲಿ ಅಶಾಂತಿ ಉಂಟುಮಾಡುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಪಾಕ್ತಿಸ್ತಾನ, ಬಾಂಗ್ಲಾ, ಅಫ್ಘಾನಿಸ್ತಾನ್ನಿಂದ ನುಸುಳುಕೋರರಾಗಿ ಬಂದಿರುವ ಮುಸ್ಲಿಂಮರಿಗೆ ಭಾರತ ಪೌರತ್ವ ನೀಡುವ ಪ್ರಶ್ನೆ ಇಲ್ಲ. ಪ್ರತಿಭಟನೆಯು ಯಾರ ಪರವಾಗಿ ಪ್ರತಿಭಟನೆಗಳು ನಡೆಯುತ್ತದೆ. ಈ ಮಸೂದೆಯಂತೆ ಭಾರತದಲ್ಲಿ ನೆಲೆಸಿರುವ ಮುಸ್ಲಿಂಮರಿಗೆ ಯಾವುದೇ ತೊಂದರೆ ಇಲ್ಲ. ಹೀಗಿದ್ದರೂ ಅವರುಗಳು ರಸ್ತೆಗೆ ಇಳಿದು ಪ್ರತಿಭಟನೆ ಯಾಕಾಗಿ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತಿದೆ. ಕಾಂಗ್ರೆಸ್ ಹಾಗೂ ಪ್ರತಿಭಟಿಸುತ್ತಿರುವ ಇತರ ಸಂಘಟನೆಯ ಮುಖಂಡರುಗಳ ದೇಶನಿಷ್ಠೆಯನ್ನು ಪ್ರಶ್ನಿಸುವ ಕಾಲ ಪಕ್ವವಾಗಿದೆ ಎಂದರು.
ಪ್ರತಿಭಟನೆ ಮಾಡುವ ಮೂಲಕ ನೀವು ಭಾರತ ದೇಶದ ಪರವಾಗಿದ್ದೀರೋ ಅಥವಾ ಬೇರೆ ದೇಶಗಳ ಪರವಾಗಿದಿರೋ ಎಂಬ ಸಂಶಯ ಮೂಡುತ್ತಿದೆ ಎಂದರು. ಈ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿವವನು ಹೊರಗಿನ ಸಮಾಜ ಮೌನವಾಗಿ ಸಹಿಸಿಕೊಳ್ಳುತ್ತದೆ ಎಂದು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ಮಾಜಿ ಸಚಿವ ಖಾದರ್ ಅವರ ಹೇಳಿಕೆ ಹಾಗೂ ಅದರ ಬೆನ್ನಲ್ಲೇ ಆರಂಭಗೊಂಡಿರುವ ಗಲಭೆ ಗಮನಾರ್ಹವಾಗಿದೆ. ಖಾದರ್ ಮತ್ತು ಕಾಂಗ್ರೆಸ್ ಯಾವ ಕಾಲಘಟ್ಟದಲ್ಲಿ ಅಧಿಕಾರದಲ್ಲಿ ಇತ್ತೋ ಆ ಸಂದರ್ಭಗಳಲ್ಲಿ ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ ಇಂತಹ ಗಲಭೆಗಳಿಗೆ ಇವರೇ ನೇರ ಜವಾಬ್ದಾರರು.
"ಭಾರತದ ಮುಸ್ಲಿಂಮರ ಪೌರತ್ವವನ್ನು ಮಸೂದೆಯಲ್ಲಿಯಾಗಲಿ,ಕೇಂದ್ರ,ರಾಜ್ಯ ಸರಕಾರವಾಗಲಿ ಅಥವಾ ಬಿಜೆಪಿ ಕಸಿದುಕೊಳ್ಳುತ್ತದೆ ಎಂದು ಎಂದಿಗೂ ಹೇಳಿಲ್ಲ.ಆದರೆ ಖಾದರ್ರನ್ನು ಸೇರಿಸಿಕೊಂಡು ನಮಗೆ ಈ ದೇಶದಲ್ಲಿ ನೆನೆಸಲು ಸಾಧ್ಯವಿಲ್ಲ, ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ದೇಶದಲ್ಲಿ ಅಸಹನೆ ಇದೆ ಎಂಬ ಭಾವನೆಗಳು ಇದ್ದರೆ ಅವರೆಲ್ಲರೂ ಪಾಕಿಸ್ತಾನಕ್ಕೆ ಹೋಗಲಿ, ಪಾಕಿಸ್ತಾನದ ಪೌರತ್ವ ಸ್ವೀಕರಿಸಲಿ ಅದನ್ನು ನಾವು ಸ್ವಾಗತಿಸುತ್ತೇವೆ’. ಹಾಗೆಂದು ಭಾರತೀಯ ಪೌರತ್ವವನ್ನು ಇಟ್ಟುಕೊಂಡು ಪಾಕಿಸ್ತಾನ, ಬಾಂಗ್ಲಾದಿಂದ ಬಂದಂತಹ ಮುಸ್ಲಿಂಮರಿಗೆ ಇಲ್ಲಿ ಪೌರತ್ವ ನೀಡಿಬೇಕೆಂದರೆ ಖಂಡಿತವಾಗಿ ಸಹಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಸಿದರು.
ಕರಾವಳಿಗೆ ಬೆಂಕಿ ಹಾಕುತ್ತೇವೆ ಎಂಬುವುದರ ಪಟ್ಟಿಯಲ್ಲಿ ಶಾಸಕ ಖಾದರ್ , ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಂಸದೆ ಶೋಭಾ ಕರಂದ್ಲಾಜೆ ಸಹಿತ ಕೆಲ ಸಂಘಟನೆಯ ಮುಖಂಡರು ಹೇಳಿಕೆ ನೀಡಿರುವುದು ಸಮಂಜಸವೇ ಎಂಬ ಮಾಧ್ಯಮದವರ ಪ್ರಶ್ನೆ ಉತ್ತರಿಸಿದ ಸುನೀಲ್ಕುಮಾರ್, ಬೆಂಕಿ ಹಾಕುತ್ತೇವೆ ಎಂದು ಯಾರು ಹೇಳುತ್ತಾರೆಯೋ ಅದು ಖಂಡಿತವಾಗಿಯೂ ತಪ್ಪು. ನಾನು ಅವತ್ತು ಬಂಟ್ವಾಳದಲ್ಲಿ ನೀಡಿರುವ ಹೇಳಿಕೆಯೂ ನಾನು ಸ್ವಯಂ ಪ್ರೇರಿತವಾಗಿ ಕೊಟ್ಟ ಹೇಳಿಕೆಯಲ್ಲ. ಬದಲಾಗಿ ಅಂದಿನ ಸಚಿವ ರಮಾನಾಥ ರೈ ನೀಡಿರುವ ಹೇಳಿಕೆಗೆ ಪ್ರತಿಸ್ವಂದನವಾಗಿ ನೀಡಿರುವ ಹೇಳಿಕೆ ಅದಾಗಿತ್ತು. ಅಧಿಕಾರದಲ್ಲಿ ಇರುವಾಗ 60 ದಿನಗಳ ಕಾಲ ಕರಾವಳಿಯಲ್ಲಿ ೧೪೪ ಸೆಕ್ಷನ್ ಜಾರಿಗೊಳಿಸಿರುವುದು ಕಾಂಗ್ರೆಸ್ ಕಾಲದಲ್ಲಿ. 13 ಜನ ಹಿಂದುಗಳ ಮಾರಣ ಹೋಮವಾದಾಗ ಇವರೆಲ್ಲಿದ್ದರು. ಅವಾಗ ಪರೋಕ್ಷವಾಗಿ ಪ್ರೇರಣೆ ನೀಡಿದರು. ಈಗ ಮಂತ್ರಿಯಾಗಿಲ್ಲ.ನೇರವಾಗಿ ಹೇಳಿಕೆ ಕೊಡುವ ಮೂಲಕ ಖಾದರ್ ಪ್ರತ್ಯೇಕ್ಷವಾಗಿ ಗಲಭೆಗೆ ಕಾರಣಕರ್ತರಾಗಿದ್ದಾರೆ ಎಂದರು.
ದೇಶದಲ್ಲಿ ೩೭೦ ವಿಧಿ ಜಾರಿಗೊಂಡಾಗ, ತಲಾಖ್ ನಿಷೇಧ ಜಾರಿಗೊಂಡಾಗ, ಅಯೋಧ್ಯೆ ತೀರ್ಪು ಬಂದಾಗ ದೇಶದಲ್ಲಿ ಯಾವುದೇ ಗಲಭೆಯಾಗಿಲ್ಲ. ಆದರೆ ಪೌರತ್ವ ಕಾಯಿದೆ ತಿದ್ದುಪಡಿಯಲ್ಲಿ ಮುಸ್ಲಿಂಮರಿಗೆ ಗಲಭೆ ಮಾಡುವ ಉದ್ದೇಶ ಏನಿದೆ? ಮಂಗಳೂರಿನಲ್ಲಿ ನಡೆದಿರುವ ಗಲಭೆ ಕೇರಳ ಭಾಗದಿಂದ ಜನರನ್ನು ಕರೆಸಿಕೊಂಡು ಸ್ಥಳೀಯರನ್ನು ಪ್ರಚೋದಿಸುವ ಮೂಲಕ ಪೊಲೀಸರ ಮೇಲಿನ ಹಲ್ಲೆ, ಸಾರ್ವಜನಿಕರ ಸೊತ್ತು ಹಾನಿ, ನಾಗರಿಕಕರ ಮೇಲೆ ಕಲ್ಲು ತೂರಾಟ ಘಟನೆ ಪೂರ್ವ ನಿಯೋಜಿತವಾಗಿದೆ. ಈ ಗಲಭೆಯ ಕ್ಯಾಪ್ಟನ್ ಖಾದರ್ ಆಗಿದ್ದಾರೆ. ಅವರ ವಿರುದ್ಧ ಮೊಕದಮೆ ದಾಖಲಿಸಿ, ಗಡಿಪಾರು ಮಾಡಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.
ಗಲಭೆ ನಿಯಂತ್ರಣ, ಸಾರ್ವಜನಿಕ ಆಸ್ತಿ ಪಾಸ್ತಿ ರಕ್ಷಣೆ, ಪೊಲೀಸರ ಮೇಲಿನ ಮಾರಾಣಾಂತಿಕ ಹಲ್ಲೆ ನಡೆಸುವ ಗುಂಪನ್ನು ಚದುರಿಸಲಿಕ್ಕಾಗಿ ಪೊಲೀಸರು ಮಾಡಿರುವ ಕಾರ್ಯವನ್ನು ನಾನು ಸಮರ್ಥಿಸಿಕೊಂಡ ಅವರು ಪೊಲೀಸರ ನೈತಿಕ ಕಾರ್ಯಕ್ಕೆ ಬೆಂಬಲಿಸಿದರು. ಕಳೆದ ಐದಾರು ವರ್ಷಗಳಿಂದ ಈ ರೀತಿಯಲ್ಲಿ ಗಲಭೆಗಳನ್ನು ಸೃಷ್ಠಿಸುವ ಕೆಲ ವ್ಯಕ್ತಿಗಳನ್ನು ನಿರ್ದಾಕ್ಷಿಣ್ಯವಾಗಿ ನಿಯಂತ್ರಣ ಮಾಡಿ, ಶಾಂತಿಯನ್ನು ನೆಲೆಸುವಂತೆ ಪೊಲೀಸ್ ಇಲಾಖೆ ದಿಟ್ಟ ಕ್ರಮ ಕೈಗೊಳ್ಳಬೇಕೇಂದರು. ಈ ರೀತಿಯಲ್ಲಿ ಗಲಭೆ,ಪ್ರತಿಭಟನೆಯಾಗುತ್ತದೆ ಎಂದ ಕಾರಣಕ್ಕೆ ಪೌತರ್ವ ತಿದ್ದುಪಡಿ ಕಾಯಿದೆಯಲ್ಲಿ ಯಾವುದೇ ಬದಲಾವಣೆ ಮಾಡದೇ ಅದನ್ನು ಅನುಷ್ಠಾನಕ್ಕೆ ತರುವ ಮೂಲಕ ದೇಶದ ಭದ್ರತೆಯನ್ನು ಇನ್ನಷ್ಟು ಬಲಗೊಳಿಸಬೇಕೆಂದು ಕೇಂದ್ರ ಸರಕಾರವನ್ನು ವಿನಂತಿಸಿದರು.