ಮಂಗಳೂರು, ಡಿ 22 (Daijiworld News/PY) : ಪೌರತ್ವ ಕಾಯ್ದೆಯ ವಿರುದ್ದ ಮಂಗಳೂರಿನಲ್ಲಿ ನಡೆದ ಹಿಂಸಾಚಾರವು ತೀವ್ರವಾಗಿ ಹದಗೆಟ್ಟ ಪರಿಣಾಮ ಅದನ್ನು ಸಂಪೂರ್ಣವಾಗಿ ಹತೋಟಿಗೆ ತರುವ ಗುರಿಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳನ್ನು ಕರೆಸಿಕೊಳ್ಳಲಾಗಿದೆ.
ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದ, ಈಗಿನ ಕಾನೂನು ಸುವ್ಯವಸ್ಥಾ ವಿಭಾಗದ ಎಡಿಜಿಪಿಯಾಗಿರುವ ದಯಾನಂದ್ ಅವರನ್ನು ಬಂದೋಬಸ್ತ್ ಮೇಲ್ವಿಚಾರಣೆ ಗೃಹ ಇಲಾಖೆ ನೇಮಿಸಿದೆ. 2017ರಲ್ಲಿ ನಡೆದ ಶರತ್ ಮಡಿವಾಳ ಕೊಲೆ ಪ್ರಕರಣದಿಂದ ಜಿಲ್ಲೆಯು ತೀವ್ರವಾಗಿ ಹದಗೆಟ್ಟಿದ್ದ ಸಂದರ್ಭ ಎಸ್ಪಿಯಾಗಿದ್ದ ಭೂಷಣ್ ರಾವ್ ಅವರನ್ನು ವರ್ಗಾವಣೆ ಮಾಡಿ ಸುಧೀರ್ ಕುಮಾರ್ ರೆಡ್ಡಿ ಅವರನ್ನು ನೇಮಿಸಲಾಗಿತ್ತು. ಸುಧೀರ್ ಕುಮಾರ್ ರೆಡ್ಡಿ ಕರ್ತವ್ಯಕ್ಕೆ ಬಂದ ನಂತರ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿನ ಕಾನೂನು ವ್ಯವಸ್ಥೆಯನ್ನು ನಿಯಂತ್ರಿಸಿದ್ದಾರೆ. ಅವರ ಕರ್ತವ್ಯವನ್ನು ತಿಳಿದು ಅವರನ್ನು ಈಗ ಮಂಗಳೂರು ಕಮಿಷನರೇಟ್ ವ್ಯಾಪ್ತಿಗೆ ಕರೆಸಿಕೊಳ್ಳಲಾಗಿದೆ.
ಇನ್ನೂ ಸೈನೈಡ್ ಮೋಹನ್ ಪ್ರಕರಣವನ್ನು ಭೇದಿಸಿದ ಡಾ. ಚಂದ್ರಗುಪ್ತ ಹಾಗೂ ಪ್ರಸ್ತುತ ಬೆಂಗಳೂರು ಸಿಸಿಬಿ ಎಸಿಪಿಯಾಗಿರುವ ವೆಂಕಟೇಶ್ವರ ಪ್ರಸನ್ನ ಅವರನ್ನು ಕೂಡಾ ನಗರದಲ್ಲಿನ ಬಂದೋಬಸ್ತ್ ನಿಗಾಕ್ಕೆ ಕರೆಸಿಕೊಳ್ಳಲಾಗಿದೆ.
ಇನ್ನುಳಿದಂತೆ ವರ್ಗಾವಣೆಗೊಂಡ ಇನ್ ಸ್ಪೆಕ್ಟರ್ ಗಳಾದ ಮಾರುತಿ ನಾಯಕ್, ಬೆಳ್ಳಿಯಪ್ಪ ಅವರು ಬಂದೋಬಸ್ತ್ ನಿರ್ವಹಣೆ ಮಾಡುತ್ತಿದ್ದಾರೆ.