ಬಂಟ್ವಾಳ, ಡಿ 22 (Daijiworld News/PY) : ಕರೋಪಾಡಿ ಗ್ರಾಮದ ಕೇರಳ- ಕರ್ನಾಟಕ ಗಡಿಭಾಗದ ಪಾದೆಕಲ್ಲುವಿನಲ್ಲಿ ಬುಲೆಟ್ ಬೈಕ್- ಎಂ. ಸ್ಯಾಂಡ್ ಲಾರಿ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲಿಯೇ ಬೈಕ್ ಸವಾರ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ಮೃತಪಟ್ಟ ಬೈಕ್ ಸವಾರನನ್ನು ಮುಗುಳಿ ನಿವಾಸಿ ಅನ್ವರ್ ಹಾಗೂ ಗಾಯಗೊಂಡ ಸಹ ಸವಾರನನ್ನು ನವಾಫ್ ಎಂದು ಗುರುತಿಸಲಾಗಿದೆ.
ಕೇರಳಕ್ಕೆ ಎಂ.ಸ್ಯಾಂಡ್ ಸಾಗಾಟ ಮಾಡುವ ಲಾರಿ ಪಾದೆಕಲ್ಲು ತಿರುವಿನಲ್ಲಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಉರುಳಿ ಬಿದ್ದಿದ್ದು, ಲಾರಿಯ ಚಕ್ರ ಅನ್ವರ್ ಹೊಟ್ಟೆ ಮೇಲೆ ಚಲಿಸಿ ಆತನ ಶರೀರ ಛಿದ್ರಗೊಂಡಿದೆ.
ಘಟನೆ ನಡೆದ ಸಂದರ್ಭ ಸ್ಥಳದಲ್ಲಿದ್ದ ಸಾರ್ವಜನಿಕರು ಮರಳು ಲಾರಿಗಳ ಸಂಚಾರದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಧಾವಿಸಿದ್ದು, ಪ್ರತಿಭಟನೆ ನಡೆಸಿದ ಜನರನ್ನು ಚದುರಿಸಿ, ಘಟನೆಯ ಬಗ್ಗೆ ಪರಿಶೀಲಿಸಿ, ತನಿಖೆ ಕೈಗೊಂಡಿದ್ದಾರೆ.