ಮಂಗಳೂರು, ಡಿ 23(Daijiworld News/MSP): ಮಂಗಳೂರಿನಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ನೌಶಿನ್ ಮತ್ತು ಜಲೀಲ್ ಮನೆಗೆ ಇಂದು ಕೇರಳ ಯುಡಿಎಫ್ ನಿಯೋಗ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದೆ.
ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿ ತ್ತಾನ್ , ಕಣ್ಣೂರು ಸಂಸದ ಕೆ . ಸುಧಾಕರನ್ ,ಮಂಜೇಶ್ವರ ಶಾಸಕ ಎಂ .ಸಿ ಖಮರುದ್ದೀನ್ , ಕಾಸರಗೋಡು ಶಾಸಕ ಎನ್ . ಎ ನೆಲ್ಲಿಕುನ್ನು , ಶಾಸಕರಾದ ಪಾರಕ್ಕಲ್ ಅಬ್ದುಲ್ಲ, ಶಂಶುದ್ದೀನ್ ಸೇರಿದಂತೆ ಆರು ಮಂದಿಯ ನಿಯೋಗ ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದೆ.
ಕಳೆದ ಗುರುವಾರದಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ ಮಂಗಳೂರಿನಲ್ಲಿ ತೀವ್ರ ಸ್ವರೂಪ ಪಡೆದಿತ್ತು. ನಿಷೇಧಾಜ್ಞೆ ಉಲ್ಲಂಘಿಸಿ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನಲೆಯಲ್ಲಿ ಗಲಭೆ ನಿಯಂತ್ರಿಸುವ ವೇಳೆ ಪೊಲೀಸರ ಗುಂಡಿಗೆ ಇಬ್ಬರು ಪ್ರತಿಭಟನಕಾರರು ಬಲಿಯಾಗಿದ್ದರು.