ಉಡುಪಿ, ಡಿ 23 (DaijiworldNews/SM): ನನ್ನ ಗುರುಗಳಾದ ಪೇಜಾವರ ಶ್ರೀಗಳನ್ನು ನಾನು ಭೇಟಿ ಮಾಡಿದ್ದೆನೆ. ಇಲ್ಲಿನ ಆಸ್ಪತ್ರೆಯ ವೈದ್ಯರು ದೆಹಲಿಯ ಏಮ್ಸ್ ಆಸ್ಪತ್ರೆಯ ವೈದ್ಯರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಉತ್ತಮವಾದ ಚಿಕಿತ್ಸೆಯನ್ನು ನೀಡುತಿದ್ದಾರೆ ಎಂದು ಉಮಾಭಾರತಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕೆಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಕೂಡಾ ಆಸ್ಪತ್ರೆಯ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ. ಶ್ರೀಗಳ ಭಕ್ತಾಭಿಮಾನಿಗಳು ಅವರು ಪೂರ್ಣವಾಗಿ ಗುಣಮುಖರಾಗಲು ಪ್ರಾರ್ಥಿಸುವಂತೆ ನಾನು ಕೇಳಿಕೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಉಮಾಭಾರತಿ ತಿಳಿಸಿದರು.
ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಪೇಜಾವರ ವಿಶ್ವೇಶರ್ತೀರ್ಥ ಶ್ರೀಗಳನ್ನು ಭೇಟಿ ಮಾಡಿ ಅವರು ಮಾದ್ಯಮದವರೊಂದಿಗೆ ಮಾತನಾಡಿದರು.