ಮಂಗಳೂರು, ಡಿ 24(Daijiworld News/MSP): ಮಂಗಳೂರಿನಲ್ಲಿ ನಡೆದ ಗಲಭೆ ರಾಜ್ಯ ಸರ್ಕಾರದ ವೈಫಲ್ಯ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಡಿ.24 ರ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, " ಗಲಭೆಯಲ್ಲಿ ಎಂಟು ಮಂದಿ ಗಾಯಗೊಂಡು, ಇಬ್ಬರು ಅಮಾಯಕರು ಸಾವನ್ನಪ್ಪಿದ್ದಾರೆ. ನಾನು ಮೃತರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯೂ ದೇಶದಾದ್ಯಂತ ೨೫ ಕ್ಕೂ ಹೆಚ್ಚು ಜೀವಗಳನ್ನು ಬಲಿಪಡೆದಿದೆ.
ಇಂತಹ ಗಲಭೆಯಾದಾಗ ಬಿಜೆಪಿ ಪ್ರತಿನಿಧಿಗಳು ಎಲ್ಲಿದ್ದರು?, ಅವರು ಮಾನವೀಯತೆ ನೆಲೆಯಿಂದ ಆಸ್ಪತ್ರೆಗೆ ಏಕೆ ಭೇಟಿ ನೀಡಲಿಲ್ಲ. ಸಿ.ಟಿ.ರವಿ, ಸುರೇಶ್ ಅಂಗಾಡಿ ಮುಂತಾದ ಬಿಜೆಪಿ ನಾಯಕರ ಹೇಳಿಕೆಗಳನ್ನು ಗಮನಿಸಿದಾಗ ಅದು ಉದ್ದೇಶಪೂರ್ವಕ ಮತ್ತು ರಾಜಕೀಯ ಪ್ರೇರಿತವಾಗಿದೆ ಎನ್ನುವುದು ಅರಿವಾಗುತ್ತದೆ ಎಂದು ಕಿಡಿಕಾರಿದರು
ಗಲಭೆಯ ಘಟನೆಗಳಾದಾಗ ಇಷ್ಟು ತುರ್ತಾಗಿ ಗೋಲಿಬಾರ್ ಮಾಡಿರುವ ಘಟನೆ ರಾಜ್ಯದ ಇತಿಹಾಸದಲ್ಲೇ ಇಲ್ಲ, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಸಾಧ್ಯವಾಗದ ಪೊಲೀಸ್ ಆಯುಕ್ತರನ್ನು ವಜಾಗೊಳಿಸಬೇಕು ಎಂದು ಹೇಳಿದರು.
ಮಾಜಿ ಶಾಸಕರಾದ ಜೆ.ಆರ್ ಲೋಬೊ, ಮೊಹಿಯುದ್ದೀನ್ ಬಾವಾ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.