ಬ್ರಹ್ಮಾವರ, ಡಿ 25(Daijiworld News/MSP): ಹರೀಶ್ ಬಂಗೇರ ಅವರ ಹೆಸರಲ್ಲಿ ನಕಲಿ ಖಾತೆ ತೆರೆದು ಸೌದಿ ಅರೇಬಿಯಾ ರಾಜ ಮತ್ತು ಮೆಕ್ಕಾದ ವಿರುದ್ಧ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವ ಕಿಡಿಗೇಡಿಗಳ ಕೃತ್ಯದಿಂದ ಸೌದಿಯಲ್ಲಿ ಬಂಧಿತನಾಗಿರುವ ಹರೀಶ್ ಬಂಗೇರ ಶೀಘ್ರ ಬಿಡುಗಡೆಗೆ ಹಾರೈಸಿ ಹರೀಶ್ ಮನೆಯಿಂದ ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಪಾದಯಾತ್ರೆ ಮುಖಾಂತರ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಟೀಮ್ ಅಭಿಮತ ಆಯೋಜಿಸಿದ್ದ ಈ ಪಾದಯಾತ್ರೆಯೂ ಬೆಳಗ್ಗೆ 7 ಗಂಟೆಗೆ ಹರೀಶ್ ಮನೆಯಿಂದ ಹೊರಟು ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಮುಖಾಂತರ ನೇರವಾಗಿ ಆನೆಗುಡ್ಡೆಗೆ ತೆರಳಿತು. ಸುಮಾರು 300ಕ್ಕೂ ಅಧಿಕ ಮಂದಿ ಆಗಮಿಸಿದ್ದ ಈ ಮೆರವಣಿಗೆಯಲ್ಲಿ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಹರೀಶ್ ಅವರ ಶೀಘ್ರ ಬಿಡುಗಡೆಗೆ ಪ್ರಾರ್ಥಿಸಲಾಯಿತು.
ಈ ಸಂದರ್ಭ ಹಲವಾರು ಹಿಂದೂಪರ ಸಂಘಟನೆಗಳು, ಸ್ಥಳೀಯ ಯುವಕ ಮಂಡಲ ಮತ್ತು ಭಜನಾ ಸಂಘಟನೆಗಳು ಸಾಥ್ ನೀಡಿದ್ದರು.