ಉಡುಪಿ, ಡಿ 26 (Daijiworld News/MSP): ಫೇಸ್ಬುಕ್ ಮೂಲಕ ಸೌದಿ ದೊರೆ ಹಾಗೂ ಅರೇಬಿಯಾದ ಪವಿತ್ರ ಕ್ಷೇತ್ರಗಳ ಕುರಿತು ಅವಹೇಳನಕಾರಿ ವಾಕ್ಯಗಳನ್ನು ಪ್ರಕಟಿಸಿದ್ದಾರೆ ಎಂಬ ಆರೋಪದಲ್ಲಿ ಬಂಧಿತನಾದ ಹರೀಶ್ ಬಂಗೇರ ಪ್ರಕರಣದಲ್ಲಿ ಇದೀಗ ಇನ್ನೊಂದು ನಕಲಿ ಖಾತೆಯನ್ನು ಸೃಷ್ಠಿಸಿರುವುದನ್ನು ಗಮನಿಸಲಾಗಿದೆ.
ಮೊದಲ ಬಾರಿಗೆ ಡಿ.20ರಂದು ರಾತ್ರಿ 1.35ಕ್ಕೆ ಸೃಷ್ಠಿಸಿದ ನಕಲಿ ಖಾತೆಯಲ್ಲಿ ಕಿಡಿಗೇಡಿಗಳು ಡಿ.22ರಂದು ಸಂಜೆ ಸುಮಾರು 4.30ಕ್ಕೆ ಹರೀಶ್ ಬಂಧನಕ್ಕೆ ಕಾರಣರಾಗಿದ್ದರು. ಈ ನಕಲಿ ಖಾತೆಯನ್ನು ಅದೇ ದಿನ ರಾತ್ರಿ 8.30ಕ್ಕೆ ಡಿಲೀಟ್ ಮಾಡಲಾಗಿತ್ತು.
ಇದೀಗ ಡಿ.24ರಂದು ಮಧ್ಯಾಹ್ನ 12.30ಕ್ಕೆ ಇನ್ನೊಂದು ನಕಲಿ ಖಾತೆಯನ್ನು ಸೃಷ್ಠಿಸಿ ಅದರಲ್ಲಿ ಹರೀಶ್ ಬಂಧನದ ಸುದ್ದಿ ಹಾಗೂ ಪೋಟೋವನ್ನು ಪ್ರಕಟಿಸಿದ್ದಾರೆ. ಇದನ್ನು ಪ್ರಕಟಿಸಿದ ಕೆಲವೇ ಸಮಯದಲ್ಲಿ ಅದನ್ನು ಡಿಲೀಟ್ ಮಾಡಲಾಗಿದೆ. ಇವೆಲ್ಲವನ್ನು ಸ್ಕ್ರೀನ್ ಶಾಟ್ ಮೂಲಕ ದಾಖಲಿಸಲಾಗಿದೆ.
ಈ ಎರಡೂ ನಕಲಿ ಖಾತೆಯನ್ನು ಡಿಲೀಟ್ ಮಾಡುವ ಸಮಯದಲ್ಲಿ ಹರೀಶ್ ಬಂಗೇರ ಪೊಲೀಸ್ ಬಂಧನದಲ್ಲಿರುವುದನ್ನು ಫೇಸ್ಬುಕ್ ಹಾಗೂ ತನಿಖಾ ಸಂಸ್ಥೆಯ ಗಮನಕ್ಕೆ ತರಲಾಗಿದೆ. ಇದರಿಂದಾಗಿ ತನಿಖಾ ಹರೀಶ್ ಬಂಗೇರ ಅಮಾಯಕ ಎಂಬುದನ್ನು ಸಾಧಿಸಲು ಸಾಧ್ಯವಾಗಿದೆ ಎಂದು ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶಾನುಭಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.