ಮಂಗಳೂರು,ಡಿ 26 (Daijiworld News/MSP): ಸೌರಮಂಡಲದಲ್ಲಿ ನೆರಳು ಬೆಳಕಿನ ಖಗೋಳ ಕೌತುಕ ಬೆಂಕಿಯ ಬಳೆಯಾಟ ಆರಂಭವಾಗಿದೆ. ಒಂಭತ್ತು ವರ್ಷಗಳ ಬಳಿಕ ಇಂದು ಬೆಳಗ್ಗೆ 8.03 ಕಂಕಣ ಸೂರ್ಯಗ್ರಹಣ ಕಾಲ ಆರಂಭವಾಗಿ 11.11ಕ್ಕೆ ಮೋಕ್ಷ ಕಾಣಲಿದೆ.
ಗ್ರಹಣದ ಮಧ್ಯ ಕಾಲ 9.24 ರಿಂದ 9.29 ನಡುವಿನ ಸಮಯ ಎಂದು ಗುರುತಿಸಲಾಗಿದೆ. ಈ ಅವಧಿಯಲ್ಲಿ ಸೂರ್ಯ ಬೆಂಕಿಯ ಬಳೆಯಂತೆ ಕಾಣಿಸಿಕೊಳ್ಳುತ್ತಾನೆ.
2019ರ ಮೂರನೇ ಮತ್ತು ಕೊನೆಯ ಸೂರ್ಯಗ್ರಹಣ ಇದಾಗಿದ್ದು ಖಗೋಳಸಕ್ತರ ಗಮನವೆಲ್ಲಾ ಸೂರ್ಯ ಮೇಲಿದೆ. ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಸೂರ್ಯನ ಕಿರಣಕ್ಕೆ ಅಡ್ಡಿಯಾಗುವುದನ್ನು ಗ್ರಹಣ ಎನ್ನಲಾಗುತ್ತದೆ. ಆದರೆ ಈ ಭಾರಿಯ ಸೂರ್ಯಗ್ರಹಣದಲ್ಲಿ ಚಂದ್ರ, ಶೇ 90 ರಷ್ಟು ಅಂದರೆ ಸೂರ್ಯನ ಸುತ್ತಲಿನ ಭಾಗ ಉಂಗುರದಂತೆ ಕಾಣಿಸಿಕೊಳ್ಳುತ್ತದೆ. ಇದನ್ನೇ ಕಂಕಣ ಸೂರ್ಯಗ್ರಹಣ ಎನ್ನಲಾಗುತ್ತದೆ.
ಈ ಬಾರಿ ಸೂರ್ಯನಿಗೂ ಭೂಮಿಗೂ ಅಂತರ ಕಡಿಮೆ ಇರುವ ಕಾರಣ ಸೂರ್ಯ ದೊಡ್ಡದಾಗಿರುತ್ತಾನೆ. ಚಂದ್ರ ಅಡ್ಡ ಬಂದರೂ ಕೂಡ ಸೂರ್ಯ ಸಂಪೂರ್ಣವಾಗಿ ಮುಚ್ಚುವುದಿಲ್ಲ. ಕಂಕಣ ಆಕಾರದಲ್ಲಿ ಸೂರ್ಯ ಗೋಚರವಾಗಿದೆ.