ಮೂಡಬಿದಿರೆ, ಡಿ 26 (Daijiworld News/MSP): ಮೂಡಬಿದಿರೆ "ಕೋಟಿ - ಚೆನ್ನಯ" ಜೋಡುಕರೆ ಕಂಬಳ ಕೇವಲ 20 ಗಂಟೆಯಲ್ಲಿ ಮುಗಿದು ದಾಖಲೆ ಬರೆದಿದೆ. ಗುರುವಾರ ಸೂರ್ಯಗ್ರಹಣ ಸಂಭವಿಸಲಿದ್ದ ಕಾರಣ ಕಂಬಳವನ್ನು ಮುಂಜಾನೆ ವೇಳೆಯೆ ಮುಗಿಸಬೇಕಾಗದ ಒತ್ತಡ ಆಯೋಜಕರ ಮೇಲಿತ್ತು. ಈ ಹಿನ್ನಲೆಯಲ್ಲಿ ಗುರುವಾರ ಮುಂಜಾನೆ 4.30 ಸುಮಾರಿಗೆ ಕಂಬಳ ಕೂಟ ಮುಕ್ತಾಯವಾಯಿತು.
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :
ಕನೆಹಲಗೆ: 2 ಜೊತೆ
ಅಡ್ಡಹಲಗೆ: 6 ಜೊತೆ
ಹಗ್ಗ ಹಿರಿಯ: 16 ಜೊತೆ
ನೇಗಿಲು ಹಿರಿಯ: 24 ಜೊತೆ
ಹಗ್ಗ ಕಿರಿಯ: 14 ಜೊತೆ
ನೇಗಿಲು ಕಿರಿಯ: 100 ಜೊತೆ
ಒಟ್ಟು ಕೋಣಗಳ ಸಂಖ್ಯೆ : 162 ಜೊತೆ
ಕನೆಹಲಗೆ:
ಬೇಲಾಡಿ ಬಾವ ಅಶೋಕ್ ಶೆಟ್ಟಿ
ಹಲಗೆ ಮುಟ್ಟಿದವರು: ನಾರಾವಿ ಯುವರಾಜ ಜೈನ್
(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)
ಬೊಳ್ಳಂಬಳ್ಳಿ ಚೈತ್ರ ಪರಮೇಶ್ವರ ಭಟ್
ಹಲಗೆ ಮುಟ್ಟಿದವರು:
ಬೈಂದೂರು ಭಾಸ್ಕರ ದೇವಾಡಿಗ
(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)
ಅಡ್ಡ ಹಲಗೆ:
ಪ್ರಥಮ: ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ
ಹಲಗೆ ಮುಟ್ಟಿದವರು: ಪಣಪೀಲು ರಾಜವರ್ಮ ಮುದ್ಯ
ದ್ವಿತೀಯ: ಮೋರ್ಲ ಗಿರೀಶ್ ಆಳ್ವ
ಹಲಗೆ ಮುಟ್ಟಿದವರು: ಬಂಗಾಡಿ ಕುದ್ಮನ್ ಲೋಕಯ್ಯ ಗೌಡ
ಹಗ್ಗ ಹಿರಿಯ:
ಪ್ರಥಮ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ "A"
ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ
ದ್ವಿತೀಯ: ಮೂಡಬಿದ್ರಿ ನಿವ್ ಪಡಿವಾಲ್ಸ್ ಹಾರ್ಧಿಕ್ ಹರ್ಷವರ್ಧನ ಪಡಿವಾಲ್ "A"
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ಹಗ್ಗ ಕಿರಿಯ:
ಪ್ರಥಮ: ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ "A"
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ದ್ವಿತೀಯ: ಎರ್ಮಾಳ್ ಡಾ.ಚಿಂತನ್ ರೋಹಿತ್ ಹೆಗ್ಡೆ "B"
ಓಡಿಸಿದವರು: ಪಣಪಿಲ ಪ್ರವೀಣ್ ಕೋಟ್ಯಾನ್
ನೇಗಿಲು ಹಿರಿಯ:
ಪ್ರಥಮ: ಇರುವೈಲು ಪಾನಿಲ ಬಾಡ ಪೂಜಾರಿ
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ದ್ವಿತೀಯ: ಮಾರ್ನಾಡ್ HP ನಿವಾಸ ದಿವಂಗತ ನಾರಾಯಣ ಆಚಾರ್ಯ
ಓಡಿಸಿದವರು: ಕಡಂದಲೆ ಭವನೀಶ್
ನೇಗಿಲು ಕಿರಿಯ:
ಪ್ರಥಮ: ಮೂಡಬಿದ್ರಿ ನಿವ್ ಪಡಿವಾಲ್ಸ್ ಮಿಥುನ್ ಶೆಟ್ಟಿ
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ದ್ವಿತೀಯ: ಬ್ರಹ್ಮಾವರ ಹಂದಾಡಿ ಶೇಖರ ಪೂಜಾರಿ
ಓಡಿಸಿದವರು: ಪಣಪಿಲ ಪ್ರವೀಣ್ ಕೋಟ್ಯಾನ್