ಬಂಟ್ವಾಳ, ಡಿ 26 (Daijiworld News/MSP): ಹಣದ ವಿಚಾರದಲ್ಲಿ ಅಣ್ಣ ತಮ್ಮಂದಿರ ಮಧ್ಯೆ ನಡೆದ ಗಲಾಟೆ ಕೊನೆಗೆ ಕೊಲೆಯಲ್ಲಿ ಅಂತ್ಯವಾದ ಘಟನೆ ಮೆಲ್ಕಾರ್ ಸಮೀಪದ ಬೋಳಂಗಡಿ ಎಂಬಲ್ಲಿ ಡಿ.26 ರ ಗುರುವಾರ ನಡೆದಿದೆ.
ಮೆಲ್ಕಾರ್ ಸಮೀಪದ ಪಾಣೆಮಂಗಳೂರು ಗ್ರಾಮದ ಬೋಳಂಗಡಿ ನಿವಾಸಿ ಮುಯ್ಯ ಯಾನೆ ಲಿಯೋ ಲೋಬೊ( 50) ಎಂಬವರು ಕೊಲೆಯಾದವರು.
ಲಿಯೋ ಅವರ ಅಣ್ಣ ಕಿಲ್ಲೆ ಯಾನೆ ಸಿರಿಲ್ ಲೋಬೊ ಅವರು ಕೊಲೆ ಆರೋಪಿ.ಮನೆಯಲ್ಲಿ ನಿತ್ಯವೂ ಕುಡಿದು ಹಣದ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಸುಮಾರು ಹತ್ತು ಗಂಟೆಯ ವೇಳೆಗೆ ಅಣ್ಣ ತಮ್ಮಂದಿರು ಹಣದ ವಿಚಾರಕ್ಕೆ ಗಲಾಟೆ ಮಾಡಿ ಬಳಿಕ ದೊಣ್ಣೆಯಲ್ಲಿ ಹೊಡೆದಾಡಿಕೊಂಡಿದ್ದಾರೆ. ದೊಣ್ಣೆ ಯ ಬಲವಾದ ಏಟಿಗೆ ಲಿಯೋ ಲೋಬೊ ಅವರು ಮನೆಯೊಳಗೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ತಮ್ಮ ನಿಗೆ ಸುಮಾರು ಒಂದುವರೆ ಲಕ್ಷ ರೂ ಹಣ ಅಣ್ಣ ಸಿರಿಲ್ ಲೋಬೊ ಅವರು ನೀಡಿದ್ದು ಅ ಹಣವನ್ನು ವಾಪಾಸು ನೀಡುವಂತೆ ಬಲವಂತ ಮಾಡುತ್ತಿದ್ದ ಎಂದು ಹೇಳಲಾಗುತ್ತದೆ.ಮನೆಯಲ್ಲಿ ಇವರಿಬ್ಬರೆ ವಾಸವಾಗಿದ್ದು ಇಬ್ಬರಿಗೂ ಮದುವೆ ಯಾಗಿಲ್ಲ. ಸ್ಥಳಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ , ನಗರ ಠಾಣಾ ಎಸ್. ಐ.ಅವಿನಾಶ್ ಸಿಬ್ಬಂದಿ ಗಳಾದ ಮುರುಗೇಶ್, ಗಿರೀಶ್, ಬಸಪ್ಪ, ಯೋಗೀಶ್, ಪ್ರವೀಣ್, ನಿರಂಜನ್ ಅವರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.