ಮಂಗಳೂರು, ಜ 23 : ನಗರದ ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಯೊಬ್ಬ ಮೇಲೆ ಮಾನಸಿಕ ಹಿಂಸೆ ನೀಡಿ ಆತನ ಹೆತ್ತವರಿಂದ ಹದಿನೈದು ಲಕ್ಷ ವಸೂಲಿ ಮಾಡಿದ ಘಟನೆ ನಡೆದಿದೆ. ವಿಚಾರಣಾಧೀನ ಕೈದಿ ಸಿರಿನ್ ಹಣ ಕಳೆದುಕೊಂಡವನು. ಐಒಬಿ ಬ್ಯಾಂಕ್ ಖಾತೆಯಿಂದ, ಕೆಆರ್ ಐಡಿಎಲ್ ಗೆ ಸೇರಿದ ಸುಮಾರು 55 ಕೋಟಿ ರೂಪಾಯಿ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿರುವ ಬ್ಯಾಂಕಿನ ಕುಳಾಯಿ ಶಾಖೆ ಮ್ಯಾನೇಜರ್ ಸಿರಿನ್ ಮಧುಸೂದನ್, ಮಂಗಳೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ. ಈತನ ಸೆಲ್ ನಲ್ಲಿಯೇ ಕೋಡಿಕೆರೆ ಗ್ಯಾಂಗ್ ನ ತಿಲಕ್ ಹಾಗೂ ಮಿಥುನ್ , ಶಿವು , ನಿಖಿಲ್, ರಾಜು, ಚರಣ್ ಸಹಿತ ಮತ್ತಿತರ ೮ ಮಂದಿ ಇದ್ದು , ಸಂಸ್ಥೆಗೆ ವಂಚಿಸಿದ ಹಣದಲ್ಲಿ ತಮಗೂ ಪಾಲು ನೀಡುವಂತೆ ಮಾನಸಿಕವಾಗಿ ಕಿರುಕುಳ ನಡೆಸುತ್ತಿದ್ದರು. ಆದರೆ ಇದಕ್ಕೆ ಸಿರಿಸ್ ಬಗ್ಗದಾಗ ಆತನ ಮೇಲೆ ದೈಹಿಕ ಕಿರುಕುಳ ನೀಡಿ, ರ್ಯಾಗಿಂಗ್ ಮಾಡಿ ಆತನ ಹೆತ್ತವರಿಗೆ ಜೈಲಿನ ಒಳಗಿನಿಂದಲೇ ಕರೆ ಮಾಡಿ ಬ್ಲಾಕ್ ಮೇಲ್ ಮಾಡಿದ್ದಾರೆ. ಈ ಬೆದರಿಕೆಗೆ ಮಣಿದ ಪೋಷಕರು ಹದಿನೈದು ಲಕ್ಷವನ್ನು ಮೂರು ಕಂತಿನಲ್ಲಿ ಪಾವತಿಸಿದ್ದಾರೆ. ಇನ್ನು ಈ ಬಗ್ಗೆ ಸಿರಿನ್ ಪೋಷಕರು ಬರ್ಕೆ ಟಾಣೆಗೆ ದೂರು ನೀಡಿದ್ದು ವಿಚಾರಣೆ ನಡೆಯುತ್ತಿದೆ.