ಮಂಗಳೂರು ಜ 23: ನಗರದಲ್ಲಿ ಒಂದು ತಿಂಗಳೊಳಗೆ 5 ಕೊಲೆಗಳು ನಡೆದಿವೆ ಹೀಗಾಗಿ ಈಗ ಸುರಕ್ಷತೆ ಎಲ್ಲಿದೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ . ಇದರಲ್ಲಿ ಯಾರದ್ದೋ ದ್ವೇಷ - ದಳ್ಳುರಿಗೆ ಮೂರು ಮಂದಿ ಅಮಾಯಕ ಜೀವಗಳು ಬಲಿಯಾಗಿದ್ರೆ, ಉಳಿದ ಎರಡು ಕೊಲೆಗಳು ಗ್ಯಾಂಗ್ ವಾರ್ ಗೆ ನಡೆದದ್ದಾಗಿದೆ. ವಿದ್ಯಾವಂತರ ನಗರಿ ಮಂಗಳೂರಿನಲ್ಲಿ ಇದೀಗ ರಾಜಾರೋಷವಾಗಿ ಹತ್ಯೆ- ಹಲ್ಲೆ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಬಗ್ಗೆ ನಾಗರಿಕರಲ್ಲಿ ಆತಂಕ ಮೂಡಿದೆ.
ಡಿ. 25ರಂದು ರೌಡಿ ಮೆರ್ಲಿಕ್ ಡಿ'ಸೋಜಾ ಹತ್ಯೆ , ಜ. 3ರಂದು ಕಾಟಿಪಳ್ಳದಲ್ಲಿ ದೀಪಕ್ ರಾವ್ ಹಾಗೂ ಬಶೀರ್ ಕೊಲೆ ಪ್ರಕರಣ, ಜ.13ರಂದು ಟಾರ್ಗೆಟ್ ಇಲ್ಯಾಸ್ ಕೊಲೆ , ಜ. 22ರಂದು ಶಿವರಾಜ್ ಹತ್ಯೆ ಈ ಐದು ಪ್ರಕರಣಗಳು ಕರಾವಳಿ ನಾಗರಿಕರನ್ನು ಬೆಚ್ಚಿ ಬೀಳಿಸಿದೆ. ಈ ನಡುವೆ ನಡೆದ ಗ್ಯಾಂಗ್ ವಾರ್ ಗಳು ಮಂಗಳೂರಿನಲ್ಲಿ ನಟೋರಿಯಸ್ ಗಳು ಮತ್ತೆ ತಮ್ಮ ಬಾಲ ಬಿಚ್ಚಿರುವುದಕ್ಕೆ ಉದಾಹರಣೆಯಾಗಿದೆ.
ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಕಾನೂನಿನ ಭಯವಿಲ್ಲದೆ, ಗ್ಯಾಂಗ್ ವಾರ್ ಸಾಮಾಜಿಕ ಶಾಂತಿ ಕದಡುವ ದುಷ್ಕರ್ಮಿಗಳ ಅಟ್ಟಹಾಸ ಗರಿಗೆದರಿದ್ದು, ನಗರದ ಜನತೆಯನ್ನು ಬೆಚ್ಚಿಬೀಳಿಸಿದೆ. ಹೀಗಾಗಿ ಸುರಕ್ಷತೆ ಎಲ್ಲಿದೆ ಎಂದು ಜಿಲ್ಲಾಡಳಿತ , ಪೊಲೀಸ್ ಇಲಾಖೆಯ ಮೇಲೆ ನಾಗರೀಕರು ಬೊಟ್ಟು ಮಾಡುವ ಸಂದರ್ಭ ನಿರ್ಮಾಣವಾಗಿದೆ.
ದೀಪಕ್ , ಬಶೀರ್ ಮತ್ತು ಶಿವರಾಜ್